ಬಂಟ್ವಾಳ, ಸೆಪ್ಟೆಂಬರ್ 05, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಪಡೂರು ಗ್ರಾಮದ ಕಾಡಬೆಟ್ಟು ಕ್ರಾಸ್ ಬಳಿ ಸೋಮವಾರ ಕಾರು ಹಾಗೂ ಅಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ ಅಟೋ ಚಾಲಕ ಸಹಿತ ನಾಲ್ವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಕಾರು ಚಾಲಕ, ಬೆಂಗಳೂರು, ಕೆಂಪೇಗೌಡ ಲೇಔಟ್ ನಿವಾಸಿ ಎನ್ ಮೊಹಮ್ಮದ್ (72) ಅವರು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೊಹಮ್ಮದ್ ಅವರು ಸೋಮವಾರ ತನ್ನ ಕಾರಿನಲ್ಲಿ ಸಂಬಂಧಿಕರೊಂದಿಗೆ ಬರುತ್ತಿದ್ದ ವೇಳೆ ಕಾವಳಪಡೂರು ಗ್ರಾಮದ ಕಾಡಬೆಟ್ಟು ಕ್ರಾಸ್ ಬಳಿ ಆಟೋರಿಕ್ಷಾ ಚಾಲಕನ ನಿರ್ಲಕ್ಷ್ಯತನದಿಂದ ಕಾರಿಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.
ಅಪಘಾತದಿಂದಾಗಿ ಆಟೋ ರಿಕ್ಷಾ ಚಾಲಕ ಸಂಜೀವ ಪೂಜಾರಿ, ಪ್ರಯಾಣಿಕರಾದ ಪದ್ಮಲತಾ, ಕುಮಾರಿ ಶ್ರೀನಿತಾ ಹಾಗೂ ಅಪ್ಪಿ ಪೂಜಾರಿ ಎಂಬವರು ಗಾಯಗೊಂಡಿದ್ದು, ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2023 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment