ಬೆಳ್ತಂಗಡಿ, ಸೆಪ್ಟೆಂಬರ್ 18, 2023 (ಕರಾವಳಿ ಟೈಮ್ಸ್) : ತಾಲೂಕಿನ ಕುತ್ಲೂರು ಗ್ರಾಮದ ಕುತ್ಲೂರು ಎಂಬಲ್ಲಿ ಸೋಮವಾರ ಅಕ್ರಮ ಗೋಸಾಗಾಟ ಬೇಧಿಸಿದ ವೇಣೂರು ಪೊಲೀಸರು ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಇಡ್ಕಿ ಜಿಲ್ಲೆಯ ತೋಡುಪುಡ ನಿವಾಸಿ ತೋಮಸ್ (34) ಹಾಗೂ ಬೆಳ್ತಂಗಡಿ ತಾಲೂಕು, ಕುತ್ಲೂರು ಗ್ರಾಮದ ನಿವಾಸಿ ರಂಜಿತ್ (31) ಎಂದು ಹೆಸರಿಸಲಾಗಿದೆ. ಬಂಧಿತರಿಂದ 1 ಗಂಡು ಕರು, ಸಾಗಾಟಕ್ಕೆ ಬಳಸಿದ ಜೀಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58-2023 ಕಲಂ 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment