ಬೆಳ್ತಂಗಡಿ, ಸೆಪ್ಟೆಂಬರ್ 24, 2023 (ಕರಾವಳಿ ಟೈಮ್ಸ್) : ತಾಲೂಕಿನ ಕಾಶಿಪಟ್ಣ ಗ್ರಾಮದ ಹಳೆ ಅಂಗನವಾಡಿ ಕಟ್ಟಡದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವೇಣೂರು ಠಾಣಾ ಪೊಲೀಸರು ಆರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ರವಿರಾಜ್ (65), ಜಯಾನಂದ (35), ರಜಾಕ್ (67), ಅಶೋಕ್ ಶೆಟ್ಟಿ (44), ತಾಜು ಶಿರ್ತಾಡಿ ಮತ್ತು ಶಬೀರ್ ವಾಲ್ಪಾಡಿ ಎಂದು ಹೆಸರಿಸಲಾಗಿದೆ. ಬಂಧಿತರಿಂದ ಇಸ್ಪೀಟ್ ಎಲೆಗಳನ್ನು ಹಾಗೂ ಆಟಕ್ಕೆ ಬಳಸಿದ ನಗದು ಹಣ ಒಟ್ಟು 1960/- ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60-2023 ಕಲಂ 87 ಕೆ ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment