ಉಪ್ಪಿನಂಗಡಿ, ಸೆಪ್ಟೆಂಬರ್ 03, 2023 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕು, ತೆಕ್ಕಾರು ಗ್ರಾಮದ, ಸರಳಿಕಟ್ಟೆ-ಮೂಡಡ್ಕ ಹಾಗೂ ಇಳಂತಿಲ ಗ್ರಾಮದ ರಿಫಾಯಿನಗರ ಎಂಬಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಗಾಂಜಾ ಸೇವನೆ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿಗಳಾದ ಮಹಮ್ಮದ್ ಸಫೀಕ್ (24) ಹಾಗೂ ಅಬ್ದುಲ್ ಸಲೀಂ (24), ಬುಡೋಳಿ ನಿವಾಸಿ ಸಹ್ಯಾಝ್ ಅಹಮ್ಮದ್ (23), ಬಿಳಿಯೂರು ಗ್ರಾಮದ ನಿವಾಸಿ ಸಲೀಂ ಹುಸೈನ್ (40) ಎಂದು ಹೆಸರಿಸಲಾಗಿದೆ.
ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟ ಹಿನ್ನಲೆಯಲ್ಲಿ ಅವರ ವಿರುದ್ದ ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
0 comments:
Post a Comment