ಪುತ್ತೂರು, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ನಾಯಿ ಅಡ್ಡ ಬಂದುದನ್ನು ತಪ್ಪಿಸಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ಮೀರಿದ ಕಾರು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಚಾಲಕ ಸಹಿತ ಐದು ಮಂದಿ ಗಾಯಗೊಂಡ ಘಟನೆ ಪುತ್ತೂರು ತಾಲೂಕು ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಅಪಘಾತದಿಂದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು, ಕಾಟುಕುಕ್ಕೆ ನಿವಾಸಿ ಶ್ರೀಮತಿ ಪರಮೇಶ್ವರಿ ಕೆ (65), ಅವರ ಪತಿ ಬಾಲಸುಬ್ರಹ್ಮಣ್ಯ, ಮೊಮ್ಮಕ್ಕಳಾದ ಭಾವನಾ, ಅನಿರುದ್ದ್ ಹಾಗೂ ಕಾರು ಚಾಲಕ ಬಾಲಕೃಷ್ಣ ಅವರು ಗಾಯಗೊಂಡಿದ್ದಾರೆ.
ನಾಯಿ ಅಡ್ಡ ಬಂತೆಂದು ಒಮ್ಮೆಲೆ ಚಾಲಕ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ಮೀರಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸಾರ್ವಜನಿಕರು ತಕ್ಷಣ ಅಟೋ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment