ಬಂಟ್ವಾಳ, ಸೆಪ್ಟೆಂಬರ್ 26, 2023 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೂರು ವರ್ಷದ ಹೆಣ್ಣು ಮಗು ರಿಕ್ಷಾದಿಂದ ಹೊರಗೆ ರಸ್ತೆಗೆಸೆಯಲ್ಟಟ್ಟು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ತಾಲೂಕು, ಕಡಿರುದ್ಯಾವರ ಗ್ರಾಮದ ನಿವಾಸಿ ಅಶ್ರಫ್ ಇಸ್ಮಾಯಿಲ್ ಕುರುಡ್ಯ ಅವರು ಠಾಣೆಗೆ ದೂರು £ೀಡಿದ್ದು, ಅಶ್ರಫ್ ಇಸ್ಮಾಯಿಲ್ ಅವರು ಭಾನುವಾರ ಮಧ್ಯಾಹ್ನ ಮಗಳ ಚಿಕಿತ್ಸೆಗಾಗಿ, ತನ್ನ ತಮ್ಮ ಮುಸ್ತಫಾ ಅವರು ಚಾಲಕರಾಗಿದ್ದ ಅಟೋ ರಿಕ್ಷಾದಲ್ಲಿ ಮಕ್ಕಳಾದ ಸಫಾ ಅಜ್ಮೀ (3) ಹಾಗೂ ಐಜಾ ಫಾತಿಮಾ ಅವರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಹೋಂಡಾ ಶೋರೂಂ ಬಳಿ ತಿರುವು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಂತೆ, ಅಟೋ ರಿಕ್ಷಾದದಲ್ಲಿದ್ದ ಮಗು ಸಫಾ ಅಜ್ಮಿ ರಿಕ್ಷಾದಿಂದ ಹೊರಗೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯಗೊಂಡು ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ್ದು, ತಕ್ಷಣ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು £ೀಡಿರುವ ದೂರಿನ ಪ್ರಕಾರ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment