ಪುತ್ತೂರು, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ನಿಲ್ಲಿಸಿದ್ದ ಹಿಟಾಚಿಗೆ ಡಿಕ್ಕಿಯಾದ ಜೀಪು ಪಲ್ಟಿಯಾಗಿ ಐದು ಮಂದಿ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಅಪಘಾತದಿಂದ ಜೀಪ್ ಚಾಲಕ ಮುಹಮ್ಮದ್ ಶಫೀಕ್, ಪ್ರಯಾಣಿಕರಾದ ನಝೀರ್ ಬಿ, ಮುಹಮ್ಮದ್ ನಿಝಾಮುದ್ದೀನ್, ಮುಹಮ್ಮದ್ ಶಾಹಿರ್, ಅಬ್ದುಲ್ ಸಲೀಂ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಗಾಯಾಳುಗಳ ಪೈಕಿ ನಝೀರ್, ನಿಝಾಮುದ್ದೀನ್, ಶಾಹಿರ್ ಹಾಗೂ ಚಾಲಕ ಶಫೀಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಪುತ್ತೂರು ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2023 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment