ಬಂಟ್ವಾಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ತಾಲೂಕಿನ ಇರಾ-ಪರಪ್ಪು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎಸ್ ಎ ಅಬ್ದುಲ್ಲಾ ಅವರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಅಬ್ದುಲ್ಲಾ ಅವರು, ಆಗಸ್ಟ್ 25 ರಂದು ಮದ್ಯಾಹ್ನ ಮಸೀದಿಯಲ್ಲಿ ಇತರ ಪಾಧಾಧಿಕಾರಿಗಳ ಜೊತೆಯಲ್ಲಿದ್ದ ವೇಳೆ ಆರೋಪಿಗಳಾದ ಸಮದ್, ನಾಸೀರ್ ಎರ್ಮಾಜೆ, ಫಾರೂಕ್ ಕುದಿ ಫಾರೂಕ್, ಮುಸ್ತಫಾ ಪರ್ಲಡ್ಕ, ರಹೀಂ ಪರ್ಲಡ್ಕ ಹಾಗೂ ಮೊಹಮ್ಮದ್ (ಮೋನು) ಎಂಬವವರು ಅವ್ಯಾಚವಾಗಿ ಬೈದು, ಬೆದರಿಕೆ ಹಾಕಿರುವುದಲ್ಲದೇ, ಹಲ್ಲೆ ನಡೆಸಲು ಹೊಡೆಯಲು ಬಂದಿರುತ್ತಾರೆ ಎಂದು ದೂರಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2023 ಕಲಂ 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
0 comments:
Post a Comment