ಬಂಟ್ವಾಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ಆನ್ ಲೈನ್ ಪ್ರೊಡಕ್ಟ್ ಸರಿಯಿಲ್ಲದ ಹಿನ್ನಲೆಯಲ್ಲಿ ಸಂಸ್ಥೆಗೆ ಕರೆ ಮಾಡಿದ ಸಂಪರ್ಕಿಸಿದ ಮಹಿಳೆ ಸಾವಿರಾರು ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಿ ಸಿ ರೋಡು ಸಮೀಪದ ಮೊಡಂಕಾಡಪು ನಿವಾಸಿ ವಿಶಾಲ್ ಎಂ ಎಕ್ಕುಂಡಿ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಪತ್ನಿ ಲಲಿತಾ ಅವರು ಜುಲೈ 18 ರಂದು ಆನ್ ಲೈನ್ ಮೂಲಕ ಪ್ರಾಡೆಕ್ಟ್ ಒಂದನ್ನು ಬುಕ್ ಮಾಡಿದ್ದರು. ಜುಲೈ 26 ರಂದು ಆನ್ ಲೈನ್ ಮೂಲಕ ಬಂದ ಪೆÇ್ರಡಕ್ಟ್ ಸರಿಯಿಲ್ಲದ ಹಿನ್ನೆಲೆ ಸಂಬಂಧಪಟ್ಟ ಸಂಸ್ಥೆಗೆ ವಿಚಾರಿಸುವ ಸಲುವಾಗಿ ಸಂಸ್ಥೆಯ ಸಂಪರ್ಕ ಸಂಖ್ಯೆಯನ್ನು ಗೂಗಲ್ ಮೂಲಕ ಪಡೆದು ಕರೆ ಮಾಡಿದ್ದಾರೆ. ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ ಅಪರಿಚಿತ ವ್ಯಕ್ತಿ ಸೂಚಿಸಿದಂತೆ ಲಲಿತಾ ಅವರು ಬ್ಯಾಂಕ್ ಖಾತೆ ವಿವರ, ಎಟಿಎಂ ಕಾರ್ಡ್ ವಿವರಗಳನ್ನು ನೀಡಿದ್ದು, ಬಳಿಕ ಲಲಿತಾ ಅವರ ಬ್ಯಾಂಕ್ ಖಾತೆಯಿಂದ 63 ಸಾವಿರ ರೂಪಾಯಿ ಹಣವು ಬೇರೆ ಯಾವುದೋ ಖಾತೆಗೆ ವರ್ಗಾವಣೆಯಾಗಿದ್ದು, ಲಲಿತಾ ಅವರನ್ನು ಅಪರಿಚಿತ ವ್ಯಕ್ತಿ ವಂಚಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2023 ಕಲಂ 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment