ಮಂಗಳೂರು, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ಎಸ್.ಜೆ.ಯು., ಎಸ್.ಜೆ.ಎಂ., ಎಸ್.ಎಂ.ಎ., ಕೆ.ಎಂ.ಜೆ., ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ಸಂಘಟನೆಗಳ ಒಕ್ಕೂಟವಾದ ಸುನ್ನೀ ಕೋ-ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ವತಿಯಿಂದ ಅಂತ್ಯಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಬೃಹತ್ ಸ್ವಲಾತ್ ಮೆರವಣಿಗೆ ಗುರುವಾರ ತಲಪಾಡಿ ಬಾಪುಕುಂಞÂ ಮುಸ್ಲಿಯಾರ್ ಅವರ ಕಬರ್ ಝಿಯಾರತ್ ನೊಂದಿಗೆ ಆರಂಭಗೊಂಡು ಉಚ್ಚಿಲ ಅರಬಿ ಸಯ್ಯಿದ್ ಮಖಾಂನಲ್ಲಿ ಸಮಾಪ್ತಿಗೊಂಡಿತು.
ಜಮೀಯ್ಯತುಲ್ ಉಲಮಾ ಉಳ್ಳಾಲ ಝೋನ್ ಕಮಿಟಿ ಕಾರ್ಯದರ್ಶಿ ಮುನೀರ್ ಸಖಾಫಿ ಕೆ.ಸಿ.ರೋಡು ರ್ಯಾಲಿಗೆ ಚಾಲನೆ ನೀಡಿದರು. ರಾಜ್ಯ ಎಸ್.ವೈ.ಎಸ್. ನಾಯಕ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮಿಲಾದ್ ಸಂದೇಶ ನೀಡಿದರು. ಉಚ್ಚಿಲದಲ್ಲಿ ಉಚ್ಚಿಲ ಮುದರ್ರಿಸ್ ಇಬ್ರಾಹಿಂ ಫೈಝಿ ಝಿಯಾರತ್ ನೇತೃತ್ವ ವಹಿಸಿದರು. ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡು ಆಶಿರ್ವಚನಗೈದರು.
ಜಾಥಾದಲ್ಲಿ ಮುಹಮ್ಮದ್ ಮದನಿ ಕೆ.ಸಿ.ರೋಡು, ಕಬೀರ್ ಅಹ್ಸನಿ ತೋಡಾರ್, ಮುಸ್ತಫಾ ಝುಹ್ರಿ ಕೆ.ಸಿ.ರೋಡು, ಕೊಮರಂಗಲ ಮದನಿ ಉಸ್ತಾದ್, ಅಬ್ಬಾಸ್ ಹಾಜಿ ಕೊಮರಂಗಲ, ಅಹ್ಮದ್ ಕುಂಞÂ ಹಾಜಿ ಪಿಲಿಕೂರು, ಅಬ್ಬಾಸ್ ಹಾಜಿ ಪೆರಿಬೈಲು, ಬಿ.ಎಚ್. ಇಸ್ಮಾಯಿಲ್ ಕೆ.ಸಿ.ರೋಡು, ಮುಹಮ್ಮದ್ ಉಚ್ಚಿಲ, ಫಾರೂಕ್ ತಲಪಾಡಿ, ಅಲ್ತಾಫ್ ಕೆ.ಸಿ.ರೋಡು, ಯುವ ಕಾಂಗ್ರೆಸ್ ಮುಖಂಡ ಅಬ್ದುಲ್ ಸಲಾಂ ಕೆ.ಸಿ.ರೋಡು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment