ಬಂಟ್ವಾಳ, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಅಂತ್ಯಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸ್ವಲಾತ್ ಮೆರವಣಿಗೆಯು ಗುರುವಾರ ನಡೆಯಿತು.
ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್, ಖತೀಬ್ ಅಸ್ವೀಫ್ ದಾರಿಮಿ, ಪ್ರಮುಖರಾದ ಮಜೀದ್ ಬೋಗೋಡಿ, ಝಕರಿಯ್ಯಾ ಬೋಗೋಡಿ, ಆಸಿಫ್ ಗುಡ್ಡೆಅಂಗಡಿ, ಹನೀಫ್ ಬೋಗೋಡಿ, ಫಾರೂಕ್, ರಿಯಾಝ್ ಬೆಂಗಳೂರು, ಆರಿಫ್ ಮೆಲ್ಕಾರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment