ಮಂಗಳೂರು, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಬಜಾಲ್-ನಂತೂರು ಇದರ ಮದ್ರಸಾ ಹಾಗೂ ಗೌಸಿಯ ಜುಮಾ ಮಸೀದಿ ನಮಾಹುಲ್ ಇಸ್ಲಾಂ ಮದರಸದ ಮಕ್ಕಳ ಮೀಲಾದ್ ಸಂದೇಶ ರ್ಯಾಲಿ ಗುರುವಾರ ನಡೆಯಿತು.
ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ದ್ವಜಾರೋಹಣಗೈದರು. ಮಸೀದಿ ಖತೀಬ್ ನಾಸಿರ್ ಸಅದಿ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಅಶ್ರಫ್ ಬಜಾಲ್, ಪ್ರಮುಖರಾದ ಬಿ ಪಕ್ರುದ್ದೀನ್, ಬಿ ಎನ್ ಅಬ್ಬಾಸ್, ಇಸ್ಮಾಯಿಲ್ ಫೈಝಲ್ ನಗರ, ಮಸೀದಿ ಆಡಳಿತ ಸಮಿತಿ ಸದಸ್ಯರುಗಳು, ಮದ್ರಸಾ ಅದ್ಯಾಪಕರುಗಳು, ಭಾಗವಹಿಸಿದ್ದರು. ಸ್ವಲಾತ್ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಸ್ಕೌಟ್ ಪಥ ಸಂಚಲನ ಗಮನ ಸೆಳೆಯಿತು. ಬಳಿಕ ಮೌಲಿದ್ ಪಾರಾಯಣ ಹಾಗೂ ತಬರ್ರುಕ್ ವಿತರಣೆ ನಡೆಯಿತು.
0 comments:
Post a Comment