ಬಂಟ್ವಾಳ, ಸೆಪ್ಟೆಂಬರ್ 29, 2023 (ಕರಾವಳಿ ಟೈಮ್ಸ್) : ತಾಲೂಕಿನ ವಾಮದಪದವು ಸಮೀಪದ ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಅಲ್ ಮಸ್ಜಿದುಲ್ ಬದ್ರಿಯದಲ್ಲಿ ಅಂತ್ಯ ಪ್ರವಾದಿ ಮಹಮ್ಮದ್ ಮುಸ್ತಾಫ (ಸ .ಅ) ಅವರ ಜನ್ಮ ದಿನಾಚರಣೆ ಗುರುವಾರ ನಡೆಯಿತು.
ಮಸೀದಿ ಅಧ್ಯಕ್ಷ ಹಂಝ ಬಸ್ತಿಕೋಡಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಮಾವಿನಕಟ್ಟೆ ಬದ್ರಿಯ ಜುಮಾ ಮಸೀದಿ ಖತೀಬ್ ಅಝಿಝ್ ಅಮ್ಜದಿ ಉದ್ಘಾಟಿಸಿದರು.
ಮಾವಿನಕಟ್ಟೆ ಮಸೀದಿ ಅದ್ಯಕ್ಷ ಅಬ್ದುಲ್ ರಝಾಕ್ ಎಲ್ಪೆಲ್, ಪ್ರಮುಖರಾದ ಆದಂ ಆಲದಪದವು, ಪುತ್ತುಮೋನು ನಡಾಯಿ, ಅಬ್ಬು ನಡಾಯಿ, ಸಿರಾಜ್ ಬಸ್ತಿಕೋಡಿ, ಇಮ್ರಾನ್ ಬಸ್ತಿಕೋಡಿ, ಅಬ್ದುಲ್ ರಹಿಮಾನ್ ಮದನಿ ಮೊದಲಾದವರು ಭಾಗವಹಿಸಿದ್ದರು.
ಆಲದಪದವು ಮಸೀದಿ ಇಮಾಮ್ ಹುಸ್ಯೆನ್ ಸಅದಿ ಸ್ವಾಗತಿಸಿ, ರಿಯಾಝ್ ಬಸ್ತಿಕೋಡಿ ಕಾರ್ಯಕ್ರಮ ನಿರೊಪಿಸಿದರು. ಇದೇ ವೇಳೆ ಮದರಸ ವಿಧ್ಯಾರ್ಥಿಗಳಿಂದ ವಿವಿದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
0 comments:
Post a Comment