ಮಂಗಳೂರು, ಸೆಪ್ಟೆಂಬರ್ 24, 2023 (ಕರಾವಳಿ ಟೈಮ್ಸ್) : ದೇರಳಕಟ್ಟೆ-ಬದ್ಯಾರ್ ನಿವಾಸಿ ಮರ್‍ಹೂಂ ಬಿ ಇದ್ದಿನಬ್ಬ ಅವರ ಪುತ್ರ ಮುಹಮ್ಮದ್ ಜಾವೀದ್ ಅವರ ವಿವಾಹವು ತಲಪಾಡಿ-ಕೆ.ಸಿ.ರೋಡು ನಿವಾಸಿ ಕೆ ಮುಹಮ್ಮದ್ ಅವರ ಪುತ್ರಿ ರಾಬಿಯತ್ ಸಫರ ಹಾಗೂ ಉಚ್ಚಿಲ ನಿವಾಸಿ ಮರ್‍ಹೂಂ ಆಲಿಯಬ್ಬ ಅವರ ಪುತ್ರ ಮುಹಮ್ಮದ್ ಅನ್ಸಾರ್ ಅವರ ವಿವಾಹವು ದೇರಳಕಟ್ಟೆ-ಬದ್ಯಾರ್ ನಿವಾಸಿ ಮರ್‍ಹೂಂ ಬಿ ಇದ್ದಿನಬ್ಬ ಅವರ ಪುತ್ರಿ ಖತೀಜಾ ಶರೀನಾ ಅವರೊಂದಿಗೆ ಸೆ 23 ರಂದು ಶನಿವಾರ ತೊಕ್ಕೊಟ್ಟು-ಕಲ್ಲಾಪು ಯುನಿಟ್ ಹಾಲ್ ನಲ್ಲಿ ನೆರವೇರಿತು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಶೈಖುನಾ ಎಂ.ಟಿ. ಅಬ್ದುಲ್ಲ ಉಸ್ತಾದ್, ಉಚ್ಚಿಲ ಜುಮಾ ಮಸೀದಿ ಖತೀಬ್ ಇಬ್ರಾಹಿಂ ಫೈಝಿ ಉಚ್ಚಿಲ ಅವರು ನಿಕಾಹ್ ನೇತೃತ್ವ ವಹಿಸಿದ್ದರು. ಕೆ.ಸಿ.ರೋಡು ಮುಬಾರಕ್ ಜುಮಾ ಮಸೀದಿ ಮುದರ್ರಿಸ್ ಮುನೀರ್ ಸಖಾಫಿ, ಪ್ರಮುಖರಾದ ಮುಹಮ್ಮದ್ ಮದನಿ, ನಾಸಿರ್ ಸಖಾಫಿ ಕೆ.ಸಿ.ರೋಡು, ಉಸ್ಮಾನ್ ಸಖಾಫಿ ಕೆ.ಸಿ.ರೋಡು, ರಹೀಂ ಝುಹ್ರಿ ಕೆ.ಸಿ.ರೋಡು, ತಬೂಕ್ ದಾರಿಮಿ, ಶರೀಫ್ ಅರ್ಶದಿ ಅಡ್ಡೂರು, ಝಮೀರ್ ಅನ್ಸಾರಿ ಕುಂಪಣಮಜಲು, ಮಜೀದ್ ಫೈಝಿ ನಂದಾವರ, ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಕಾಂಗ್ರೆಸ್ ಮುಖಂಡ ಅಬ್ದುಲ್ ಸಲಾಂ ಕೆ.ಸಿ.ರೋಡು ಮೊದಲಾದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದು, ನೂತನ ವಧೂ-ವರರಿಗೆ ಶುಭಾಶಯ ಕೋರಿದರು.
0 comments:
Post a Comment