ಬಂಟ್ವಾಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ಮಾಣಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕರ್ನಾಟಕ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.
ಕಿರಿಯ ವಿಭಾಗದಲ್ಲಿ ಖತೀಜ ಸಿಯಾನ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ, ಹಿರಿಯ ವಿಭಾಗದಲ್ಲಿ ಆಸಿಯಾ ಸಿಂಬ್ರಾ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ ಸ್ಥಾನ ಹಾಗೂ ಕಿರಿಯ ವಿಭಾಗದ ಶ್ರೀಕರ ನಾರಾಯಣ ಸಂಸ್ಕೃತ ಪಠಣದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕಿರಿಯ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಮಹತಿ ಪಿ ದ್ವಿತೀಯ ಸ್ಥಾನ ಹಾಗೂ ಕಥೆ ಹೇಳುವುದರಲ್ಲಿ ಶಿಝ ಪಾತಿಮಾ ತೃತೀಯ ಸ್ಥಾನ ಪಡೆದಿರುತ್ತಾರೆ. ಹಿರಿಯ ವಿಭಾಗದ ಮುಹಮ್ಮದ್ ರೆಹಾನ್ ಧಾರ್ಮಿಕ ಪಠಣ ತೃತೀಯ, ಪ್ರಿನೀತ್ ಸನೀಲ್ ವಿ ಮಿಮಿಕ್ರಿಯಲ್ಲಿ ತೃತೀಯ, ಮೋಕ್ಷಿತ ಸಂಸ್ಕೃತ ಪಠಣದಲ್ಲಿ ತೃತೀಯ, ಹಲೀಮ ಶೈಮಾ ಹಿಂದಿ ಕಂಠಪಾಠದಲ್ಲಿ ತೃತೀಯ ಹಾಗೂ ಚಿತ್ರ ಕಲೆಯಲ್ಲಿ ಕುಶಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
0 comments:
Post a Comment