ಬೆಂಗಳೂರು, ಸೆಪ್ಟೆಂಬರ್ 14, 2023 (ಕರಾವಳಿ ಟೈಮ್ಸ್) : ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಮತ್ತು ನ್ಯಾಯಾಂಗ ವಿಭಾಗಗಳನ್ನೊಳಗೊಂಡ ತಂಡಗಳು ಬುಧವಾರ ಬೆಂಗಳೂರಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಒ) ಗಳ ಮೇಲೆ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದೆ. ಆರ್‍ಟಿಒ ಕಚೇರಿಗಳಲ್ಲಿ ಅಕ್ರಮಗಳು ಮತ್ತು ವ್ಯಾಪಕ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ಹಲವಾರು ದೂರುಗಳು ಬಂದಿದ್ದರಿಂದ ಈ ಅನಿರೀಕ್ಷಿತವಾಗಿ ದಾಳಿ ನಡೆಸಲಾಗಿದೆ.
ಜಯನಗರ ಮತ್ತು ರಾಜಾಜಿನಗರದ ಆರ್‍ಟಿಒಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಮತ್ತು ಯಲಹಂಕ ಮತ್ತು ಯಶವಂತಪುರದಲ್ಲಿನ ಆರ್‍ಟಿಒಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಭೇಟಿ ನೀಡಿದರು. ಲೋಕಾಯುಕ್ತ ಪೆÇಲೀಸರಿಗೆ ಸಾರ್ವಜನಿಕರಿಂದ ಆರ್‍ಟಿಒಗಳಲ್ಲಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಹಲವಾರು ದೂರುಗಳು ಬಂದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಡ್ರೈವಿಂಗ್ ಲೈಸೆನ್ಸ್ ಮತ್ತು ಪರ್ಮಿಟ್ ನೀಡಲು ಬಂದಿರುವ ಅರ್ಜಿಗಳ ಸಂಖ್ಯೆ, ಬಾಕಿ ಇರುವ ಅರ್ಜಿಗಳು ಮತ್ತು ಕಾರಣಗಳು, ಯಾವುದೇ ಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುವುದು, ಏಜೆಂಟ್ ಗಳ ಹಾವಳಿ ಮತ್ತಿತರ ಅಕ್ರಮ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುವ ಮೂಲಕ ಆರೋಪ ನಿಜವೆಂದು ದೃಢಪಡಿಸಿದ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರ್‍ಟಿಒಗಳಲ್ಲಿ ದೋಷಾರೋಪಣೆ ದಾಖಲೆಗಳನ್ನು ಶೋಧಿಸಿ ವಶಪಡಿಸಿಕೊಳ್ಳಲು ವಾರಂಟ್ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿರುವ 12 ಆರ್‍ಟಿಒಗಳ ಮೇಲಿನ ದಾಳಿಗಾಗಿ ಲೋಕಾಯುಕ್ತರು 10 ತಂಡಗಳನ್ನು ರಚಿಸಿದ್ದಾಗಿ ಮೂಲಗಳು ತಿಳಿಸಿವೆ. ಆರ್‍ಟಿಒಗಳೊಂದಿಗೆ ವ್ಯವಹರಿಸುವ ಖಾಸಗಿ ಏಜೆಂಟರ ಕಚೇರಿಗೂ ತಂಡವೊಂದು ಭೇಟಿ ನೀಡಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ ಎಂದು ತಿಳಿದು ಬಂದಿದೆ.
ಡ್ರೈವಿಂಗ್ ಲೈಸೆನ್ಸ್ ಮತ್ತು ಪರ್ಮಿಟ್ ನೀಡಲು ಬಂದಿರುವ ಅರ್ಜಿಗಳ ಸಂಖ್ಯೆ, ಬಾಕಿ ಇರುವ ಅರ್ಜಿಗಳು ಮತ್ತು ಕಾರಣಗಳು, ಯಾವುದೇ ಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುವುದು, ಏಜೆಂಟ್ ಗಳ ಹಾವಳಿ ಇಂತಹ ಸಮಸ್ಯೆಗಳನ್ನು ರಾಜ್ಯಾದ ಎಲ್ಲ ಜಿಲ್ಲೆಗಳ ಆರ್.ಟಿ.ಒ. ಕಚೇರಿಗಳಲ್ಲೂ ಸಾರ್ವಜನಿಕರು ಎದುರಿಸುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಸರಕಾರ ಹಾಗೂ ಲೋಕಾಯುಕ್ತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಿಸುವ ಮೂಲಕ ಸಾರಿಗೆ ಕಚೇರಿಗೆ ಬರುವ ಗ್ರಾಹಕರಿಗೆ ರಿಲೀಫ್ ನೀಡುವಂತೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಜನ ಆಗ್ರಹಿಸಿದ್ದಾರೆ.
0 comments:
Post a Comment