ಪುದು : ವ್ಯಕ್ತಿಗೆ ದೂರವಾಣಿ ಮೂಲಕ ಜೀವ ಬೆದರಿಕೆ, ಪೊಲೀಸರಿಗೆ ದೂರು - Karavali Times ಪುದು : ವ್ಯಕ್ತಿಗೆ ದೂರವಾಣಿ ಮೂಲಕ ಜೀವ ಬೆದರಿಕೆ, ಪೊಲೀಸರಿಗೆ ದೂರು - Karavali Times

728x90

2 September 2023

ಪುದು : ವ್ಯಕ್ತಿಗೆ ದೂರವಾಣಿ ಮೂಲಕ ಜೀವ ಬೆದರಿಕೆ, ಪೊಲೀಸರಿಗೆ ದೂರು

ಬಂಟ್ವಾಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ವ್ಯಕ್ತಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಜೀಚವ ಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. 

ಪುದು ಗ್ರಾಮದ ನಿವಾಸಿ ಅಬ್ದುಲ್  ಲತೀಫ್ (48) ಎಂಬವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಆಗಸ್ಟ್ 25 ರಂದು ಸಂಜೆ 7.58 ರ ವೇಳೆಗೆ ಲತೀಫ್ ಅವರು ವಗ್ಗ ಎಂಬಲ್ಲಿದ್ದಾಗ ಆರೋಪಿ ಇಮ್ತಿಯಾಜ್ ಎಂಬಾತ ದೂರವಾಣಿ ಮೂಲಕ ಕರೆಮಾಡಿ ಅವಾಚ್ಯ ಶಬ್ದದಿಂದ  ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ನಂಬ್ರ 87/2023  ಕಲಂ 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪುದು : ವ್ಯಕ್ತಿಗೆ ದೂರವಾಣಿ ಮೂಲಕ ಜೀವ ಬೆದರಿಕೆ, ಪೊಲೀಸರಿಗೆ ದೂರು Rating: 5 Reviewed By: karavali Times
Scroll to Top