ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕಾರದ ಬಳಿಕ ರಾಜ್ಯ ಸರಕಾರದಿಂದ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ : ಎಸ್ಸೆಸ್ಸೆಲ್ಸಿ-ಪಿಯುಸಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ, ದಾಖಲು, ಇನ್ನು ಮುಂದೆ ಎಸ್ಸೆಸ್ಸೆಲ್ಸಿ-ಪಿಯುಸಿ ತರಗತಿಗಳಿಗೆ 3 ವಾರ್ಷಿಕ ಪರೀಕ್ಷೆಗಳು, ಮೂರರಲ್ಲಿ ವಿಷಯವಾರು ಗಳಿಸಿದ ಅತೀ ಹೆಚ್ಚು ಅಂಕ ಉಳಿಸಿಕೊಳ್ಳಲು ಅವಕಾಶ, ಸಂಭಾವ್ಯ ವೇಳಾಪಟ್ಟಿಯೂ ಪ್ರಕಟ - Karavali Times ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕಾರದ ಬಳಿಕ ರಾಜ್ಯ ಸರಕಾರದಿಂದ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ : ಎಸ್ಸೆಸ್ಸೆಲ್ಸಿ-ಪಿಯುಸಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ, ದಾಖಲು, ಇನ್ನು ಮುಂದೆ ಎಸ್ಸೆಸ್ಸೆಲ್ಸಿ-ಪಿಯುಸಿ ತರಗತಿಗಳಿಗೆ 3 ವಾರ್ಷಿಕ ಪರೀಕ್ಷೆಗಳು, ಮೂರರಲ್ಲಿ ವಿಷಯವಾರು ಗಳಿಸಿದ ಅತೀ ಹೆಚ್ಚು ಅಂಕ ಉಳಿಸಿಕೊಳ್ಳಲು ಅವಕಾಶ, ಸಂಭಾವ್ಯ ವೇಳಾಪಟ್ಟಿಯೂ ಪ್ರಕಟ - Karavali Times

728x90

5 September 2023

ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕಾರದ ಬಳಿಕ ರಾಜ್ಯ ಸರಕಾರದಿಂದ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ : ಎಸ್ಸೆಸ್ಸೆಲ್ಸಿ-ಪಿಯುಸಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ, ದಾಖಲು, ಇನ್ನು ಮುಂದೆ ಎಸ್ಸೆಸ್ಸೆಲ್ಸಿ-ಪಿಯುಸಿ ತರಗತಿಗಳಿಗೆ 3 ವಾರ್ಷಿಕ ಪರೀಕ್ಷೆಗಳು, ಮೂರರಲ್ಲಿ ವಿಷಯವಾರು ಗಳಿಸಿದ ಅತೀ ಹೆಚ್ಚು ಅಂಕ ಉಳಿಸಿಕೊಳ್ಳಲು ಅವಕಾಶ, ಸಂಭಾವ್ಯ ವೇಳಾಪಟ್ಟಿಯೂ ಪ್ರಕಟ

ಬೆಂಗಳೂರು, ಸೆಪ್ಟೆಂಬರ್ 06, 2023 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) ತಿರಸ್ಕರಿಸಿದ ಬಳಿಕ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮಹತ್ವಪೂರ್ಣ ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರ ಈ ಬಾರಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸುವಲ್ಲಿ ವಿಶೇಷ ಬದಲಾವಣೆ ಮಾಡಿದ್ದು, ಎರಡೂ ಬೋರ್ಡ್ ಪರೀಕ್ಷೆಗಳಲ್ಲಿ ವಾರ್ಷಿಕ 1 ರ ಬದಲಾಗಿ 3 ಪರೀಕ್ಷೆಗಳನ್ನು ನಡೆಸಲು ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸಿದ್ದತೆ ನಡೆಸಿದೆ. 

ಈ ಬಗ್ಗೆ ಮಂಡಳಿ ಪೂರ್ಣ ಪ್ರಮಾಣದಲ್ಲಿ ಸಿದ್ದತೆ ನಡೆಸಿದ್ದು ಮಾತ್ರವಲ್ಲ ಸಂಭಾವ್ಯ ಪರೀಕ್ಷಾ ವೇಳಾಪಟ್ಟಿಯನ್ನು ಕೂಡಾ ಪ್ರಕಟಿಸಿದೆ. ಮೂರು ಪರೀಕ್ಷೆಗಳಲ್ಲಿ ವಿಷಯವಾರು ಅತೀ ಹೆಚ್ಚು ಗಳಿಸಿದ ಅಂಕಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಬಂಪರ್ ಆಫರ್ ಪ್ರಕಟಿಸಿದ್ದು, ಬೋರ್ಡ್ ಪರೀಕ್ಷೆಗಳಲ್ಲಿ ಅನುತ್ತೀರ್ಣ ಪ್ರಮಾಣ ಕಡಿಮೆಗೊಳಿಸಲು ಪ್ರಯತ್ನ ನಡೆಸಿದೆ. 

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಏSಇಂಃ) ಇಂದು ಪರಿಷ್ಕೃತ ಪರೀಕ್ಷಾ ವ್ಯವಸ್ಥೆಯ ‘ಪೂರಕ ಪರೀಕ್ಷೆ’ ಯನ್ನು ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಮರು ನಾಮಕರಣ ಮಾಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಮೂರು ಅವಕಾಶಗಳನ್ನು ಒದಗಿಸುತ್ತದೆ.

ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯು ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ. ಆದರೆ, ವಿದ್ಯಾರ್ಥಿ ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹೆಚ್ಚಾಗಿದ್ದರೂ, ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ವಿದ್ಯಾರ್ಥಿಯ ನೈಜ ಅಂಕಗಳೆಂದು ಪರಿಗಣಿಸಲಾಗುತ್ತಿದೆ. ಹೀಗಾಗಿ, ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಆಯ್ಕೆಯಿರುವುದಿಲ್ಲ. ಹೀಗಾಗಿ, ಪ್ರಸ್ತುತ 2023-24ನೇ ಶೈಕ್ಷಣಿಕ ಸಾಲಿನಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ 3 ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಹೊಸ ಮಾದರಿಯ ‘ವಾರ್ಷಿಕ 1,2 ಮತ್ತು 3’ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದಲ್ಲಿ ಉತ್ತೀರ್ಣ, ಅನುತ್ತೀರ್ಣ ನಿರ್ಧಾರ ಮಾಡಲಾಗುತ್ತದೆ. ಒಂದು ವೇಳೆ ಉತ್ತೀರ್ಣರಾದ ವಿದ್ಯಾರ್ಥಿಗಳು ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದಾಗ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದು. ಆಗ ಯಾವ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೋ, ಆ ಹೆಚ್ಚಿನ ಅಂಕಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ವಿದ್ಯಾರ್ಥಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತಿದೆ. 


ಎಸ್ಸೆಸ್ಸೆಲ್ಸಿ ಸಂಭಾವ್ಯ ಪರೀಕ್ಷಾ ವೇಳಾಪಟ್ಟಿ ಈ ರೀತಿ ಇದೆ : 

ಪರೀಕ್ಷೆ 1 : ಮಾರ್ಚ್ 1 ರಿಂದ 25 ರವರೆಗೆ ನಡೆಯಲಿದ್ದು, ಎಪ್ರಿಲ್ 22 ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.          

ಪರೀಕ್ಷೆ 2 : ಮೇ15 ರಿಂದ ಜೂನ್ 5 ರವರೆಗೆ ನಡೆಯಲಿದ್ದು, ಫಲಿತಾಂಶ ಜೂನ್ 21 ರಂದು ಪ್ರಕಟಗೊಳ್ಳಲಿದೆ. 

ಪರೀಕ್ಷೆ 3 : ಜುಲೈ 12 ರಿಂದ 30 ರವರೆಗೆ ನಡೆಯಲಿದ್ದು, ಫಲಿತಾಂಶ ಆಗಸ್ಟ್ 16 ರಂದು ಪ್ರಕಟಗೊಳ್ಳಲಿದೆ ಎನ್ನಲಾಗುತ್ತಿದೆ. 


ಪಿಯುಸಿ ಸಂಭಾವ್ಯ ಪರೀಕ್ಷಾ ವೇಳಾಪಟ್ಟಿ : 

ಪರೀಕ್ಷೆ 1 : ಮಾರ್ಚ್ 30 ರಿಂದ ಎಪ್ರಿಲ್ 15ರವರೆಗೆ ನಡೆಯಲಿದ್ದು, ಮೇ 8 ರಂದು ಫಲಿತಾಂಶ ಹೊರಬರಲಿದೆ. 

ಪರೀಕ್ಷೆ 2 : ಜೂನ್ 12 ರಿಂದ 19 ರವರೆಗೆ ನಡೆಯಲಿದ್ದು, ಜೂನ್ 29 ಫಲಿತಾಂಶ ಪ್ರಕಟವಾಗಲಿದೆ. 

ಪರೀಕ್ಷೆ 3 : ಜುಲೈ 29 ರಿಂದ ಆಗಸ್ಟ್ 5 ರವರೆಗೆ ನಡೆಯಲಿದ್ದು, ಫಲಿತಾಂಶ ಆಗಸ್ಟ್ 19 ರಂದು ಹೊರಬೀಳುವ ಸಾಧ್ಯತೆ ಬಗ್ಗೆ ಬೋರ್ಡ್ ತಿಳಿಸಿದೆ. 

ಈ ಸುಧಾರಣಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ಸುತ್ತೋಲೆಯ ಮೂಲಕ ಮಂಡಳಿಯಿಂದ ನೀಡಲಾಗುವುದು. ಈ ಮೂರು ಪರೀಕ್ಷೆಗಳಲ್ಲಿ ವಿಷಯ ಮತ್ತು ಕಠಿಣತೆಯ ಮಟ್ಟದಲ್ಲಿ ಏಕರೂಪತೆಯನ್ನು ಕಾಯ್ದುಕೊಳ್ಳಲಾಗುವುದು. ಈ ಮೂರು ಪ್ರಯತ್ನಗಳಲ್ಲಿ ಗಳಿಸಿದ ಅಂಕಗಳಲ್ಲಿ, ವಿಷಯವಾರು ಅತ್ಯುತ್ತಮವಾದುದನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಡವಾಗಿ ದಾಖಲಾಗುವ ಪ್ರಥಮ ಪಿ.ಯು.ಸಿ. ಅಥವಾ ಪದವಿ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಬೋರ್ಡ್ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕಾರದ ಬಳಿಕ ರಾಜ್ಯ ಸರಕಾರದಿಂದ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ : ಎಸ್ಸೆಸ್ಸೆಲ್ಸಿ-ಪಿಯುಸಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ, ದಾಖಲು, ಇನ್ನು ಮುಂದೆ ಎಸ್ಸೆಸ್ಸೆಲ್ಸಿ-ಪಿಯುಸಿ ತರಗತಿಗಳಿಗೆ 3 ವಾರ್ಷಿಕ ಪರೀಕ್ಷೆಗಳು, ಮೂರರಲ್ಲಿ ವಿಷಯವಾರು ಗಳಿಸಿದ ಅತೀ ಹೆಚ್ಚು ಅಂಕ ಉಳಿಸಿಕೊಳ್ಳಲು ಅವಕಾಶ, ಸಂಭಾವ್ಯ ವೇಳಾಪಟ್ಟಿಯೂ ಪ್ರಕಟ Rating: 5 Reviewed By: karavali Times
Scroll to Top