ಬಂಟ್ವಾಳ, ಸೆಪ್ಟೆಂಬರ್ 08, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಮೊಡಂಕಾಪು ಬಾಲ ಯೇಸು ದೇವಾಲಯ ವತಿಯಿಂದ ಬಾಲ ಮಾರಿಯಮ್ಮನವರ ಹುಟ್ಟುಹಬ್ಬದ ಆಚರಣೆಯ ಪ್ರಯುಕ್ತ ಬಾಲ ಮಾರಿಯಮ್ಮನವರ ಪ್ರತಿಮೆಯ ಮೆರವಣಿಗೆಯು ಸೆ 8 ರಂದು ಬೆಳಿಗ್ಗೆ 6:45 ಕ್ಕೆ ಕಾಯರ್‍ಮಾರ್ ನಿಂದ ಪ್ರಾರಂಭಗೊಂಡು ಆಮ್ಟಾಡಿ ಸೊಸೈಟಿ, ನಲ್ಕೆಮಾರ್, ಏರ್ಯ ಮಾರ್ಗವಾಗಿ 8 ಗಂಟೆಗೆ ಮೊಡಂಕಾಪು ಬಾಲ ಯೇಸು ದೇವಾಲಯ ತಲುಪಿತು.
ತೆರೆದ ಆಂಗಣದಲ್ಲಿ ಮರಿಯಮ್ಮನವರ ಗ್ರೋಟ್ಟೋ ಮುಂಭಾಗದಲ್ಲಿ ಹೊಸ ತೆನೆಯನ್ನು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ವಂದನೀಯ ಮೆಲ್ವಿನ್ ಲೋಬೊ ಅವರಿಂದ ಆಶೀರ್ವಚನಗೊಂಡು, ಬಾಲ ಯೇಸು ದೇವಾಲಯದಲ್ಲಿ ದೇವಾಲಯದ ಸಹಾಯಕ ಧರ್ಮಗುರು ವಂದನೀಯ ರಾಹುಲ್ ಡೆಕ್ಸ್ಟರ್ ಡಿ’ಸೋಜಾ ಅವರಿಂದ ಶುಭವಾಚನೆಯೊಂದಿಗೆ ದೇವಾಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ವಲೇರಿಯನ್ ಡಿ’ಸೋಜ ಅವರಿಂದ ದಿವ್ಯ ಬಲಿಪೂಜೆ ಅರ್ಪಿಸಲಾಯಿತು. ಅತಿಥಿ ಧರ್ಮಗುರು ವಂದನೀಯ ಮರ್ವಿನ್ ಫ್ರ್ಯಾಂಕ್ ಉಪಸ್ಥಿತರಿದ್ದರು.
ಇದೇ ವೇಳೆ ನಾಡಿನ ಸಮಸ್ತ ಜನರಿಗೆ ಆರೋಗ್ಯ, ಸುಖ ಹಾಗೂ ಸಮೃದ್ದಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
0 comments:
Post a Comment