ಬಂಟ್ವಾಳ, ಸೆಪ್ಟೆಂಬರ್ 13, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಕಸ್ಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಗಾಯಗೊಂಡ ಬೈಕ್ ಸವಾರರನ್ನು ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯ ನಾಗಯಕೋಟಾಯಿ ನಿವಾಸಿ ಗೋಪಿನಾಥ್ ಬಿ (22) ಎಂದು ಹೆಸರಿಸಲಾಗಿದೆ. ಗೋಪಿನಾಥ್ ಅವರು ತನ್ನ ಬೈಕಿನಲ್ಲಿ ಸಂಚರಿಸುತ್ತಿರುವ ವೇಳೆ ಜಕ್ರಿಬೆಟ್ಟು ಬಳಿ ಮ್ಯಾಥ್ಯೂ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದಿಂದ ರಸ್ತೆಗೆ ಬಿದ್ದು ಗಾಯಗೊಂಡ ಗೋಪಿನಾಥ್ ಅವರನ್ನು ಬಿ ಸಿ ರೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment