ಬಂಟ್ವಾಳ, ಸೆಪ್ಟೆಂಬರ್ 22, 2023 (ಕರಾವಳಿ ಟೈಮ್ಸ್) : ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಹೇರಿಕೊಂಡು ಹೋಗುತ್ತಿದ್ದ ಈಚರ್ ಲಾರಿ ಚಾಲಕನ ನಿಯಂತ್ರಣ ಮಿರಿ ರಸ್ತೆ ಬದಿ ಗುಂಡಿಗೆ ಉರುಳಿ ಬಿದ್ದು ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಶುಕ್ರವಾರ (ಸೆ 22) ಮುಂಜಾನೆ ವೇಳೆ ನಡೆದಿದೆ.
ಗಾಯಗೊಂಡವರನ್ನು ಚಾಲಕ ರಿಯಾಜ್ ಕುಂಞÂ, ಲಾರಿಯಲ್ಲಿದ್ದ ಅರ್ಕುಳ ಗ್ರಾಮದ ಪರಂಗಿಪೇಟೆ ನಿವಾಸಿ ಆರೀಫ್ (23) ಹಾಗೂ ನಾಸಿರ್ ಎಂದು ಹೆಸರಿಸಲಾಗಿದೆ. ಶುಕ್ರವಾರ ಬೆಳಗ್ಗಿನ ಜಾವ ಈಚರ್ ಲಾರಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಲೋಡು ಮಾಡಿಕೊಂಡು ಬರುತ್ತಿದ್ದ ವೇಳೆ ಬಂಟ್ವಾಳ ತಾಲೂಕು, ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಕಾರೊಂದಕ್ಕೆ ಸೈಡ್ ಕೊಡುವ ಭರದಲ್ಲಿ ಚಾಲಕ ರಿಯಾಜ್ ಈಚರ್ ಲಾರಿಯನ್ನು ರಸ್ತೆ ಬದಿ ಕಚ್ಚಾ ಮಣ್ಣು ರಸ್ತೆಗೆ ಇಳಿಸಿದ್ದು, ಈ ವೇಳೆ ಲಾರಿಯು ಚಾಲಕನ ನಿಯಂತ್ರಣ ಮೀರಿ ಕೆಸರಿನಲ್ಲಿ ಜಾರಿ ರಸ್ತೆ ಬದಿಯ ಗುಂಡಿಗೆ ಮಗುಚಿ ಬಿದ್ದಿರುತ್ತದೆ. ಅಪಘಾತದಿಂದ ಲಾರಿ ಮುಂಭಾಗ ಜಖಂಗೊಂಡಿದ್ದು, ಲಾರಿಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಜಖಂಗೊಂಡಿರುವ ಸಾದ್ಯತೆ ಇದೆ. ಘಟನೆಯಿಂದ ಚಾಲಕ ಸಹಿತ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2023 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment