ವಿಟ್ಲ, ಸೆಪ್ಟೆಂಬರ್ 28, 2023 (ಕರಾವಳಿ ಟೈಮ್ಸ್) : ಬುಧವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವ ವೇಳೆ ಇಬ್ಬರ ನಡುವೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದಂತೆ ಗುರುವಾರ ಬೆಳಿಗ್ಗೆ ರಿಕ್ಷಾ ಅಡ್ಡಗಟ್ಟಿ ಗುಂಪು ಸೇರಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ವಿಟ್ಲ ಕಸಬ ಗ್ರಾಮದ ನಿವಾಸಿ ಮಹಮ್ಮದ್ ಸುಹೈಲ್ (25) ಅವರು ಠಾಣೆಗೆ ದೂರು ನೀಡಿದ್ದು, ಬುಧವಾರ ರಾತ್ರಿ ಕಂಬಳಬೆಟ್ಟುವಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವಾಗ ತನಗೂ ಆರೋಪಿ ಹಾರೀಸ್ ಎಂಬಾತನಿಗೂ ಮಧ್ಯೆ ಮಾತುಕತೆಯಾಗಿದ್ದು, ಮುಂದುವರಿದ ಭಾಗವಾಗಿ ಗುರುವಾರ ಬೆಳಿಗ್ಗೆ ಸುಹೈಲ್ ತನ್ನ ಅಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದಾಗ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ತಲುಪಿದಾಗ ಆರೋಪಿ ಹಾರೀಸ್ ತನ್ನ ಅಟೋ ರಿಕ್ಷಾದಲ್ಲಿ ಅಶ್ರಫ್ ಉರಿಮಜಲು, ರಿಯಾಝ್ ಉರಿಮಜಲು, ಅಚ್ಚುಕು ಕೊಲ್ಪೆ ಅವರೊಂದಿಗೆ ಬಂದು ಸುಹೈಲ್ ಅವರ ಅಟೊ ರಿಕ್ಷಾಕ್ಕೆ ಅಡ್ಡ ಇಟ್ಟು ತಡೆದು ನಿಲ್ಲಿಸಿ ಹಾರೀಸ್ ಎಂಬಾತ ಅಟೋದಲ್ಲಿದ್ದ ಸುಹೈಲ್ ಅವರಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಅಟೋ ರಿಕ್ಷಾದಲ್ಲಿದ್ದ ಕತ್ತಿ ಹಾಗೂ ದೊಣ್ಣೆಯನ್ನು ತೆಗೆದು ತೋರಿಸಿ ಬೆದರಿಕೆ ಹಾಕಿ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಸುಹೈಲ್ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment