ಬಂಟ್ವಾಳ, ಸೆಪ್ಟೆಂಬರ್ 26, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಮಹಿಳಾ ವಕೀಲರಿಂದ ಹಿರಿಯ ವಕೀಲರಾದ ಎ ಕೆ ರಾವ್ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಹಿರಿಯ ಸಿವಿಲ್ ನ್ಯಾಯಧೀಶರಾದ ಶ್ರೀಮತಿ ಭಾಗ್ಯಮ್ಮ, ಪ್ರದಾನ ಸಿವಿಲ್ ನ್ಯಾಯದೀಶರಾದ ಚಂದ್ರಶೇಖರ್ ತಳವಾರ, ಹೆಚ್ಚುವರಿ ಸಿವಿಲ್ ನ್ಯಾಯದೀಶರಾದ ಕೃಷ್ಣ ಮೂರ್ತಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು. ಹಿರಿಯ ವಕೀಲ ಪುಂಡಿಕಾಯಿ ನಾರಾಯಣ ಭಟ್ ಅವರು ಎ ಕೆ ರಾವ್ ಅವರೊಂದಿಗಿದ್ದ ಅನುಭ ಹಂಚಿಕೊಂಡರು.
ಬಂಟ್ವಾಳ ವಕೀಲರ ಸಂಘದ ಉಪಾಧ್ಯಕ್ಷ ರಾಜೇಶ್ ಬೊಳ್ಳುಕಲ್ಲು, ಹಿರಿಯ ವಕೀಲರದ ಅಶ್ವಿನ್ ಕುಮಾರ್ ರೈ, ನ್ಯಾಯವಾದಿಗಳಾದ ಶೋಭಲತಾ ಸುವರ್ಣ, ಗಣೇಶಾನಂದ ಸೋಮಯಾಜಿ, ರಮೇಶ್ ಉಪಾಧ್ಯಾಯ, ಡಿ ಜೆ ಶೆಟ್ಟಿ, ಈಶ್ವರ್ ಉಪಾಧ್ಯಾಯ, ಭಾನುಶಂಕರ್, ಸುರೇಶ ಪೂಜಾರಿ, ವೆಂಕಟರಮಣ ಶೆಣೈ, ವಿನೋದ ಎಸ್, ಶೈಲಜಾ, ದಯಾನಂದ ರೈ, ಹೇಮಚಂದ್ರ, ವಿನೋದ್ ಪಕಳಕುಂಜ, ಸಕೀನಾ, ಹಾತಿಮ್ ಅಹಮದ್, ತುಳಸೀದಾಸ್, ಆಶಾಮಣಿ ಡಿ ರೈ, ಸರಿತಾ ಪೆರವೋ, ಮಲಿಕ್ ಅನ್ಸಾರ್ ಕರಾಯ, ಶ್ರೀಧರ್ ಪೈ, ಗಣೇಶ್ ಪೈ, ಮಾಧುರಿ, ಮಮತಾ, ಆಶಾ, ಮೋಹನ್, ಗುಣ ಸಂತೋಷ್ ಹಾಗೂ ಸರಕಾರಿ ವಕೀಲರು, ಹಿರಿಯ, ಕಿರಿಯ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯಾಯವಾದಿಗಳಾದ ಮೊಹಮ್ಮದ್ ಕಬೀರ್ ಸ್ವಾಗತಿಸಿ, ಚಂದ್ರಶೇಖರ್ ಪುಂಚೆಮೆ ವಂದಿಸಿದರು.
0 comments:
Post a Comment