ಬಂಟ್ವಾಳ, ಸೆಪ್ಟೆಂಬರ್ 02, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಾಳ್ತಿಲ ಗ್ರಾಮದ ನಿವಾಸಿ ಮಹಿಳೆ ಶುಕ್ರವಾರ ಮಧ್ಯಾಹ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸುಮಾರು 30ಕ್ಕೂ ಹೆಚ್ಚು ಮಂದಿ ಆರೋಪಿಗಳ ಗುಂಪು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಹಲ್ಲೆ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂತ್ರಸ್ತ ಮಹಿಳೆ ಸೆ 1 ರಂದು ಶುಕ್ರವಾರ ಮಧ್ಯಾಹ್ನ 1.30 ರ ವೇಳೆಗೆ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ ಜೆಸಿಬಿ ಶಬ್ದ ಕೇಳಿದ ಜಾಗಕ್ಕೆ ಹೋದಾಗ, ಆರೋಪಿಗಳಾದ ರವಿಶಂಕರ, ಅನುಷ ಪಿ, ರಾಜೇಶ ವಿಟ್ಲ, ಲೊಕೇಶ, ವಿಶ್ವನಾಥ, ಸಚಿನ, ಯತೀಶ, ರಾಜಶೇಖರ ಶೆಟ್ಟಿ ಹಾಗೂ ಇತರ 25 ಮಂದಿ ಸೇರಿಕೊಂಡು ಮಹಿಳೆಯ ಕೃಷಿ ಜಮೀನಿಗೆ ಜೆಸಿಬಿ ಮೂಲಕ ಆಗಲು ಹಾಕುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದ ಮಹಿಳೆಯನ್ನುದ್ದೇಶಿಸಿ ರವಿಶಂಕರ ಹಾಗೂ ಇತರರು ಅವಾಚ್ಯ ಶಬ್ದಗಳಿಂದ ಬೈದು, ಮಹಿಳೆ ಇದ್ದ ಜಾಗಕ್ಕೆ ರವಿಶಂಕರ, ರಾಜೇಶ ವಿಟ್ಲ ಮತ್ತು ಇತರರು ಬಂದು ಅನುಚಿತವಾಗಿ ವರ್ತಿಸಿ, ಹಲ್ಲೆ ಮಾಡಿರುತ್ತಾರೆ ಎಂದು ನೀಡಲಾದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 97/2023 ಕಲಂ 143, 147, 447, 504, 354, 323, 506 ಜೊತೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment