ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಎನ್‌ಸಿಸಿ ಭೂ ದಳದ ರ‍್ಯಾಂಕ್ ಹಸ್ತಾಂತರ ಕರ‍್ಯಕ್ರಮ
ಬಂಟ್ವಾಳ, ಆಗಸ್ಟ್ 05, 2023 (ಕರಾವಳಿ ಟೈಮ್ಸ್) : ವಿದ್ಯಾರ್ಥಿ ಹಂತದಲ್ಲೇ ರಾಷ್ಟçಭಕ್ತಿಯನ್ನು ಮೂಡಿಸಿ, ಅವರಿಗೆ ಶಿಸ್ತಿನ ಮಹತ್ವವನ್ನು ಹಾಗೂ ರಾಷ್ಟಿçÃಯ ಏಕತೆ, ಸಮಗ್ರತೆ, ಸಾಮಾಜಿಕ ಸಾಮರಸ್ಯವನ್ನು ಅರ್ಥಮಾಡಿಸುವುದು ಎನ್.ಸಿ.ಸಿ.ಯ ಗುರಿಯಾಗಿದೆ ಎಂದು ಬಂಟ್ವಾಳ ಎಸ್ ವಿ ಎಸ್ ಕಾಲೇಜು ಪ್ರಾಂಶುಪಾಲ ಡಾ ಸುಯೋಗ ವರ್ಧನ್ ಡಿ ಎಂ ಹೇಳಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜು ಎನ್‌ಸಿಸಿ ಭೂ ದಳದ ರ‍್ಯಾಂಕ್ ಹಸ್ತಾಂತರ ಕರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ ರೇಖಾ ಶೆಣೈ 2022-23ನೇ ಸಾಲಿನಲ್ಲಿ ಎನ್‌ಸಿಸಿ ಭೂ-ದಳದ ‘ಸಿ’ ಮತ್ತು ‘ಬಿ’ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಉತ್ತೀರ್ಣ ಹಾಗೂ ರಾಷ್ಟಿçÃಯ ಮಟ್ಟದ ಎನ್‌ಸಿಸಿ ಕ್ಯಾಂಪ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.
2023-24ನೇ ಸಾಲಿನ ಎನ್ ಸಿ ಸಿ ಘಟಕದ ರ‍್ಯಾಂಕ್ ಗಳಾದ ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ಆಗಿ ನಿಖಿಲ್ ಕುಮಾರ್, ಕೆಡೆಟ್ ಅಂಡರ್ ಆಫೀಸರ್ ಆಗಿ ರೋಲ್ವಿನ್ ಲ್ವಾಯಿಡ್ ರೊಡ್ರಿಗಸ್, ಪ್ರಸ್ತೂತಿ, ಕಂಪನಿ ಹವ್ದಾರ್ ಮೇಜರ್ ಆಗಿ ಜ್ಞಾನೇಶ್, ವಿಮಿತಾ, ಕಂಪನಿ ಕ್ವಾರ್ಟ್ರ್ ಮಾಸ್ಟರ್ ಸರ್ಜೆಂಟ್ ಆಗಿ ಆಶ್ವಿನ್ ಎಚ್ ರೈ, ನಿಖಿತಾ ಹಾಗೂ 4 ಮಂದಿ ಸರ್ಜೆಂಟ್, 11 ಮಂದಿ ಸಿಪಿಎಲ್ ಮತ್ತು 12 ಮಂದಿ ಎಲ್‌ಸಿಪಿಎಲ್ ಪದೋನ್ನತಿ ರ‍್ಯಾಂಕ್ ಹಸ್ತಾಂತರ ನಡೆಯಿತು.
ಬಂಟ್ವಾಳ ಎಸ್ ವಿ ಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುರ್ದಶನ್ ಬಿ ಈ ಸಂದರ್ಭ ಉಪಸಿತ್ಥರಿದ್ದರು. ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ ಎನ್ ಸಿ ಸಿ ವಿದ್ಯಾರ್ಥಿಗಳ ವಾರ್ಷಿಕ ವರದಿ ಹಾಗೂ ಎನ್ ಸಿ ಸಿ ಘಟಕದ ನೂತನ ಪದೋನ್ನತಿ ಪಡೆದ ವಿದ್ಯಾರ್ಥಿಗಳ ಮಾಹಿತಿ ವಾಚಿಸಿದರು. 2022-23ನೇ ಸಾಲಿನ ನಿಕಟಪೂರ್ವ ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ರೋಹನ್ ಶೈಲೆಸ್ ಅನಿಸಿಕೆ ವ್ಯಕ್ತಪಡಿಸಿದರು. ಕೆಡಿಟ್ ಅನುಜ್ಞಾ ಜಿ ಕುಂದರ್ ಪ್ರಾರ್ಥಿಸಿದರು. ಕೆಡಿಟ್ ವಿಮಿತಾ ಪಿ ವಂದಿಸಿ, ಕೆಡಿಟ್ ಸಂಗಮೇಶ ಕರ‍್ಯಕ್ರಮ ನಿರೂಪಿಸಿದರು.
0 comments:
Post a Comment