ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದೇಶದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ದೇಶದ ಸ್ವಾತಂತ್ರ್ಯಕ್ಕಾಗಿ ಜಾತಿ-ಮತ-ವರ್ಗ ಬೇಧ ಮರೆತು ಒಂದಾಗಿ ಹೋರಾಡಿ ಮಡಿದ ಮಹಾನುಭಾವರ ತ್ಯಾಗದ ಪರಿಣಾಮವಾಗಿ ಇಂದು ಸರ್ವ ಧರ್ಮೀಯರ ಶಾಂತಿಯ ತೋಟವಾಗಿ ಪರಿಮಳ ಬೀರುತ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅಭಿಮಾನಪಟ್ಟರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸಸ್ ಸಮಿತಿ ವತಿಯಿಂದ ಬಂಟ್ವಾಳ ಪೇಟೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ದೇಶದ 77ನೇ ವರ್ಷದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್, ಅಕ್ರಮ ಸಕ್ರಮ ಸಮಿತಿಯ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್À ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹಾಬಲ ಬಂಗೇರ, ವಿಶ್ವನಾಥ ಗೌಡ ಮಣಿ, ಸೇವಾದಳದ ಮುಖ್ಯಸ್ಥ ವೆಂಕಪ್ಪ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸದಸ್ಯ ಚಂದ್ರಶೇಖರ ಆಚಾರ್ಯ, ಪ್ರಮುಖರಾದ ಪ್ರವೀಣ್ ರೋಡ್ರಿಗಸ್ ಹಂಚಿಕಟ್ಟೆ, ಅಮ್ಮು ಅರ್ಬಿಗುಡ್ಡೆ, ರಾಜೀವ್ ಕಕ್ಕೆಪದವು, ರಾಮಣ್ಣ ಪೂಜಾರಿ, ಪ್ರಕಾಶ್ ಅರ್ಬಿಗುಡ್ಡೆ, ಸೋಮಪ್ಪ ಪೂಜಾರಿ, ಬಶೀರ್ ಕೆಳಗಿನ ಪೇಟೆ, ದಿವಾಕರ ಚೆಂಡ್ತಿಮಾರ್, ಚಿಕ್ಕ ಅಬಿಗುಡ್ಡೆ, ರಿಯಾಝ್ ಹುಸೇನ್ ಬಂಟ್ವಾಳ, ಪದ್ಮನಾಭ ಮಡಿವಾಳ, ಸುಲೈಮಾನ್ ಬಡ್ಡಕಟ್ಟೆ, ರಿಯಾಝ್ ಕೆಳಗಿನಪೇಟೆ, ನವಾಝ್ ಕೆಳಗಿನಪೇಟೆ, ಸನಾವುಲ್ಲ ಜಿ ಎಚ್, ವಲಾರ್ ಬಡ್ಡಕಟ್ಟೆ, ಸಾಧಿನ್ ಜಿ ಎಚ್, ಪದ್ಮನಾಭ ಸಾವಂತ್, ನಾಸೀರ್ ಕೆಳಗಿನಪೇಟೆ, ಖಲೀಲ್ ಕೆಳಗಿನಪೇಟೆ, ಆಶ್ರಿತ್ ಬಂಗೇರ, ಇರ್ಷಾದ್ ಕೆಳಗಿನಪೇಟೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment