ಪರವಾನಿಗೆ ದುರುಪಯೋಗಪಡಿಸಿ ಮರ ಕಡಿದು ಖಾಸಗಿ ಮಿಲ್ಲಿಗೆ ಸಾಗಿಸಿದ ಆರೋಪಿ ವಿರುದ್ದ ಪ್ರಕರಣ ದಾಖಲಿಸಲು ಆಗ್ರಹಿಸಿ ಬಂಟ್ವಾಳ ಬಿಜೆಪಿ ಪ್ರತಿಭಟನೆ - Karavali Times ಪರವಾನಿಗೆ ದುರುಪಯೋಗಪಡಿಸಿ ಮರ ಕಡಿದು ಖಾಸಗಿ ಮಿಲ್ಲಿಗೆ ಸಾಗಿಸಿದ ಆರೋಪಿ ವಿರುದ್ದ ಪ್ರಕರಣ ದಾಖಲಿಸಲು ಆಗ್ರಹಿಸಿ ಬಂಟ್ವಾಳ ಬಿಜೆಪಿ ಪ್ರತಿಭಟನೆ - Karavali Times

728x90

5 August 2023

ಪರವಾನಿಗೆ ದುರುಪಯೋಗಪಡಿಸಿ ಮರ ಕಡಿದು ಖಾಸಗಿ ಮಿಲ್ಲಿಗೆ ಸಾಗಿಸಿದ ಆರೋಪಿ ವಿರುದ್ದ ಪ್ರಕರಣ ದಾಖಲಿಸಲು ಆಗ್ರಹಿಸಿ ಬಂಟ್ವಾಳ ಬಿಜೆಪಿ ಪ್ರತಿಭಟನೆ

ಬಂಟ್ವಾಳ, ಆಗಸ್ಟ್ 05, 2023 (ಕರಾವಳಿ ಟೈಮ್ಸ್) : ಪರವಾನಿಗೆ ದುರುಪಯೋಗಪಡಿಸಿ ಕೊಡ್ಯಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ಮರವನ್ನು ಕಡಿದು ಖಾಸಗಿ ಮರದ ಮಿಲ್ಲಿಗೆ ಸಾಗಿಸಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ಯುವಮೋರ್ಚಾ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.


ದೇವಶ್ಯಪಡೂರು ಗ್ರಾಮದ ಕುಂಟಾಲ್ ಪಲ್ಕೆ ಎಂಬಲ್ಲಿ ಪ್ಲಾಂಟೇಷನ್ ಮಾಡುವ ಉದ್ದೇಶದಿಂದ ಆಗಸ್ಟ್ 1 ರಂದು ಕೊಡ್ಯಮಲೆ ಕಾಡಿನಿಂದ ಮರವನ್ನು ಕಡಿಯಲು ನಾವೂರು ನಿವಾಸಿ ವ್ಯಕ್ತಿಗೆ ಅರಣ್ಯ ಇಲಾಖೆ  ಪರವಾನಿಗೆ ನೀಡಿತ್ತು. ಆದರೆ ಆತ ಜು 31 ರಂದು ಅಕ್ರಮವಾಗಿ ಮರ ಕಡಿದು ತನ್ನ ಸ್ವಂತ ಮರದ ಮಿಲ್ಲಿಗೆ ಸಾಗಿಸಿದ್ದಾನೆ. ಇದಕ್ಕೆ ಬಂಟ್ವಾಳ ವಲಯಾರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಅತನೊಂದಿಗೆ ಶಾಮೀಲಾಗಿ ಅತನ ವಿರುದ್ಧ ಕೇಸು ದಾಖಲಿಸದೆ ರಕ್ಷಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಅರಣ್ಯಾಧಿಕಾರಿಯ ವಿರುದ್ಧ ಪ್ರತಿಭಟನಾಕಾರರು ಕೂಗಿದರಲ್ಲದೆ ಸ್ಥಳಕ್ಕೆ ಜಿಲ್ಲಾ ಅರಣ್ಯಾಧಿಕಾರಿಯವರು ಆಗಮಿಸುವಂತೆ ಪಟ್ಟು ಹಿಡಿದು ಕಚೇರಿ ಗೇಟ್ ಎದುರು ಧರಣಿ ಕುಳಿತರು.

ಅರಣ್ಯ ಇಲಾಖೆ ನೀಡಿದ ಪರವಾನಿಗೆಯಂತೆ ಕಡಿದ ಮರಗಳನ್ನು  ಸರಕಾರದ ಅಧೀನದಲ್ಲಿರುವ ಮರದ ಮಿಲ್ಲಿಗೆ ಸಾಗಿಸಬೇಕಿತ್ತು. ಆದರೆ ಈತ ಪರವಾನಿಗೆಯ ದಿನಾಂಕದ ಒಂದು ದಿನ ಮೊದಲೇ ಅಕ್ರಮವಾಗಿ ಮರಗಳನ್ನು ಕಡಿದು ತನ್ನ ಮನೆಯಲ್ಲಿರುವ ಮಿಲ್ಲಿನಲ್ಲಿ ದಾಸ್ತಾನು ಮಾಡಿದ್ದು ಕಾನೂನು ಬಾಹಿರವಾಗಿರುವುದರಿಂದ ಈತನ ಮೇಲೆ ಕಾನೂನಿನ್ವಯ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಹಾಗೂ ಈತನ ಮರದ ವ್ಯಾಪಾರದ ಪರವಾನಿಗೆ ರದ್ದುಗೊಳಿಸುವಂತೆಯು ಪ್ರತಿಭಟನಾಕಾರರು ಆಗ್ರಹಿಸಿದರು.

ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಯುವ ಮೋರ್ಚಾ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶ ಸುದರ್ಶನ್ ಬಜ, ಪ್ರಮುಖರಾದ ಪ್ರಕಾಶ್ ಅಂಚನ್, ಡೊಂಬಯ ಅರಳ, ಸುರೇಶ್ ಕೋಟ್ಯಾನ್, ಹರಿಪ್ರಸಾದ್ ಭಂಡಾರಿಬೆಟ್ಟು, ಪುರುಷೊತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ರಮಾನಾಥ ರಾಯಿ, ಸಂತೋಷ್ ಕುಮಾರ್ ರಾಯಿಬೆಟ್ಟು, ಆನಂದ ಶಂಭೂರು, ಉಮೇಶ್ ಅರಳ, ಪ್ರಶಾಂತ್ ಕೆಂಪುಗುಡ್ಡೆ, ಪ್ರದೀಪ್ ಅಜ್ಜಿಬೆಟ್ಟು, ಚಿದಾನಂದ ರೈ ಕಕ್ಯ, ಸೀತಾರಾಮ ಪೂಜಾರಿ, ದಿನೇಶ್ ದಂಬೆದಾರ್, ಯಶೋಧರ ಕರ್ಬೆಟ್ಟು, ಅಶ್ವಥ್ ರಾವ್ ಬಾಳಿಕೆ, ಅನೂಪ್ ರಾಜ್, ಲಕ್ಷಣ್ ರಾಜ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.


  • Blogger Comments
  • Facebook Comments

0 comments:

Post a Comment

Item Reviewed: ಪರವಾನಿಗೆ ದುರುಪಯೋಗಪಡಿಸಿ ಮರ ಕಡಿದು ಖಾಸಗಿ ಮಿಲ್ಲಿಗೆ ಸಾಗಿಸಿದ ಆರೋಪಿ ವಿರುದ್ದ ಪ್ರಕರಣ ದಾಖಲಿಸಲು ಆಗ್ರಹಿಸಿ ಬಂಟ್ವಾಳ ಬಿಜೆಪಿ ಪ್ರತಿಭಟನೆ Rating: 5 Reviewed By: karavali Times
Scroll to Top