ಬಂಟ್ವಾಳ, ಆಗಸ್ಟ್ 18, 2023 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ಹಂಚಿಕಟ್ಟೆ ಎಂಬಲ್ಲಿ ರೋಗಿಯನ್ನು ಕೊಂಡೊಯ್ಯುತ್ತಿದ್ದ ಅಂಬ್ಯುಲೆನ್ಸ್ ರಸ್ತೆಗೆ ಉರುಳಿ ಬಿದ್ದು ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.
ಮೃತ ಅಂಬ್ಯುಲೆನ್ಸ್ ಚಾಲಕನನ್ನು ಮಡಂತ್ಯಾರು ನಿವಾಸಿ ಶಬೀರ್ ಅಹ್ಮದ್ ಎಂದು ಹೆಸರಿಸಲಾಗಿದೆ. ಶಬೀರ್ ಅಹ್ಮದ್ ಅಂಬ್ಯುಲೆನ್ಸಿನಲ್ಲಿ ರೋಗಿಗಳನ್ನು ಸೈರನ್ ಹಾಕಿಕೊಂಡು ಕರೆದುಕೊಂಡು ಹೋಗುತ್ತಿರುವ ವೇಳೆ ನಾವೂರು ಗ್ರಾಮದ ಹಂಚಿಕಟ್ಟೆ ಎಂಬಲ್ಲಿ ನಿಯಂತ್ರಣ ಮೀರಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಧರೆಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಅಂಬ್ಯುಲೆನ್ಸ್ ಚಾಲಕ ಶಬೀರ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅಂಬ್ಯುಲೆನ್ಸಿನಲ್ಲಿದ್ದ ಒಬ್ಬ ಗಂಡಸು ಹಾಗೂ ಓರ್ವ ಹೆಂಗಸಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಮೂವರನ್ನೂ ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ ಗಂಭೀರ ಗಾಯಗೊಂಡ ಚಾಲಕ ಶಬೀರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment