ಉಪ್ಪಿನಂಗಡಿ, ಆಗಸ್ಟ್ 31, 2023 (ಕರಾವಳಿ ಟೈಮ್ಸ್) : ಸಂಬಂಧಿಕ ಯುವತಿಯನ್ನು ಪ್ರೀತಿಸುವ ಬಗ್ಗೆ ತಗಾದೆ ಎತ್ತಿದ ಇಬ್ಬರು ಆರೋಪಿಗಳು ಅಂಗಡಿ ಕೆಲಸದ ಯುವಕನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪುತ್ತೂರು ತಾಲೂಕು, ನಿಡ್ಪಳ್ಳಿ ಗ್ರಾಮದ ನಿವಾಸಿ ಸುನೀಲ್ ಕುಮಾರ್ (32) ಪೊಲೀಸರಿಗೆ ದೂರು ನೀಡಿದ್ದು, ಆ 29 ರಂದು ಸಂಜೆ ಸುನಿಲ್ ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸಿನ ಅಂಗಡಿಯಲ್ಲಿ ಕೆಲಸದಲ್ಲಿರುವಾಗ ಆರೋಪಿಗಳಾದ ಪ್ರವೀಣ್ ಮತ್ತು ಶೇಖರ ಎಂಬವರುಗಳು ಅಂಗಡಿಗೆ ಬಂದು ತಮ್ಮ ಸಂಬಂಧಿ ಯುವತಿಯನ್ನು ಸುನೀಲ್ ಪ್ರೀತಿ ಮಾಡುತ್ತಿರುವ ಹಾಗೂ ಮೆಸೇಜ್ ಮಾಡುತ್ತಿರುವ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಅಂಗಡಿಯಲ್ಲಿದ್ದ ಸ್ಕ್ರೂ ಡ್ರೈವರ್ ನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 116/2023 ಕಲಂ 448, 504, 323, 324, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment