ಧರ್ಮಸ್ಥಳ, ಆಗಸ್ಟ್ 03, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನ ಸರಕಾರದ ಕಠಿಣ ಕ್ರಮಕ್ಕೆ ಹಾಗೂ ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆಗೆ ಸವಾಲೊಡ್ಡಿರುವ ದುಷ್ಕರ್ಮಿಗಳ ಪಡೆ ನೈತಿಕ ಗೂಂಡಾಗಿರಿಯನ್ನು ಮುಂದುವರಿಸಿದೆ.
ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿ ಕುಟುಂಬದ ಮೇಲೆ ದಾಳಿ, ಮಂಗಳೂರಿನಲ್ಲಿ ಪತ್ರಕರ್ತನ ಮೇಲೆ ದಾಳಿ ಬಳಿಕ ಇದೀಗ ಬುಧವಾರ ರಾತ್ರಿ ಉಜಿರೆಯಲ್ಲಿ ಅಟೋ ರಿಕ್ಷಾ ಚಾಲಕನನ್ನು ಗುರಿಯಾಗಿಸಿ ಗಂಭೀರ ಹಲ್ಲೆ ನಡೆಸಲಾಗಿದೆ.
ಉಜಿರೆ ನಿವಾಸಿ ಮಹಮ್ಮದ್ ಆಸೀಕ್ ಎಂಬಾತನು ಬಾಡಿಗೆಗೆ ಎಂದು ತನ್ನ ಆಟೋ ರಿಕ್ಷಾದಲ್ಲಿ ಉಜಿರೆಯಿಂದ ಹುಡುಗಿಯೊಬ್ಬರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಬಂದು ಬಾಡಿಗೆ ಮುಗಿಸಿ ವಾಪಾಸ್ಸು ಉಜಿರೆ ಕಡೆಗೆ ತೆರಳುತ್ತಿರುವ ಸಮಯ ಅಪರಿಚಿತ ದುಷ್ಕರ್ಮಿಗಳ ತಂಡ ಆಟೋ ರಿಕ್ಷಾ ತಡೆದು ನಿಲ್ಲಿಸಿ ಚಾಲಕ ಮಹಮ್ಮದ್ ಆಸಿಕ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2023 ಕಲಂ 143, 147, 341, 323, 504, 506 ಆರ್/ಡಬ್ಲ್ಯು 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment