ಬಂಟ್ವಾಳ, ಆಗಸ್ಟ್ 22, 2023 (ಕರಾವಳಿ ಟೈಮ್ಸ್) : ವಿಟ್ಲ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ ಹೊಂದಿರುವ ವಿದ್ಯಾರ್ಥಿಗಳಾದ ದೀಕ್ಷಿತ್ (15) ಹಾಗೂ ಗಗನ್ (14) ಎಂಬವರು ಕಾಣೆಯಾದ ಬಗ್ಗೆ ವಿಟ್ಲ ಪೊಲೀಸಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಪ್ರಮೀಳಾ ಅವರು ಪೊಲೀಸರಿಗೆ ದೂರು ನೀಡಿದ್ದು, ವಿಧ್ಯಾರ್ಥಿನಿಲಯದಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ವಿದ್ಯಾರ್ಥಿಗಳಾದ ದೀಕ್ಷೀತ್ ಹಾಗೂ ಗಗನ್ ಎಂಬವರು ಎಂದಿನಂತೆ ಶಾಲೆಗೆ ಹೋಗುವುದಾಗಿ ಸೋಮವಾರ ಕೂಡಾ ಬೆಳಿಗ್ಗೆ ವಿದ್ಯಾರ್ಥಿ ನಿಲಯದಿಂದ ತೆರಳಿದ್ದು, ಸಾಯಂಕಾಲ ಸುಮಾರು 4.30 ಗಂಟೆವರೆಗೂ ವಾಪಾಸು ಬರದೆ ಇದ್ದು, ಉಳಿದ ವಿಧ್ಯಾರ್ಥಿಗಳಲ್ಲಿ ವಿಚಾರಿಸಿದಾಗ ಈ ಇಬ್ಬರು ವಿದ್ಯಾರ್ಥಿಗಳು ಶಾಲೆಗೂ ಹೋಗದೆ ಇರುವುದು ತಿಳಿದು ಬಂದಿದೆ.
ಇತ್ತ ಶಾಲೆಗೆ ಹಾಗೂ ಹಾಸ್ಟೆಲಿಗೆ ಹೋಗದೆ ಇತ್ತ ಮನೆಗೂ ಇವರು ಹೋಗದೆ ಇದ್ದು, ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಹಾಸ್ಟೆಲ್ ಮೇಲ್ವಿಚಾರಕಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಠಾಣೆಯಲ್ಲಿ ಅಪರಾಧ ಕ್ರಮಾಂಕ 148/2023 ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment