ಬೋಳಂಗಡಿ ಶಾಲೆಗೆ ನುಗ್ಗಿ ನಗದು ಎಗರಿಸಿದ ಕಳ್ಳರು - Karavali Times ಬೋಳಂಗಡಿ ಶಾಲೆಗೆ ನುಗ್ಗಿ ನಗದು ಎಗರಿಸಿದ ಕಳ್ಳರು - Karavali Times

728x90

19 August 2023

ಬೋಳಂಗಡಿ ಶಾಲೆಗೆ ನುಗ್ಗಿ ನಗದು ಎಗರಿಸಿದ ಕಳ್ಳರು

 ಬಂಟ್ವಾಳ, ಆಗಸ್ಟ್ 19, 2023 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಶಾಲೆಗೆ ನುಗ್ಗಿದ ಕಳ್ಳರು ಶಾಲಾ ಕಪಾಟಿನ ಲಾಕರಿನಲ್ಲಿದ್ದ 25 ಸಾವಿರ ರೂಪಾಯಿ ನಗದು ಎಗರಿಸಿ ಪರಾರಿಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಪೂಜಾರಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,  ಶುಕ್ರವಾರ (ಆ 18) ಸಂಜೆ ಶಾಲೆ ಮುಗಿಸಿ   ಶಾಲಾ ಕಛೇರಿಗೆ ಬೀಗ ಹಾಕಿ ತೆರಳಿದ್ದು, ಶನಿವಾರ (ಆ 19) ಬೆಳಿಗ್ಗೆ   ಶಾಲೆಗೆ ಬಂದಾಗ ಶಾಲಾ ಕಛೇರಿ ಬೀಗ ಒಡೆದಿರುವುದು ಕಂಡು ಬಂದಿರುತ್ತದೆ. ಶಾಲಾ ಕಛೇರಿಯ ಕಪಾಟಿನ ಒಳಗಿದ್ದ ಕಡತಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿತ್ತು. ಶಾಲಾ ಕಪಾಟಿನ ಲಾಕರ್ ನಲ್ಲಿರಿಸಲಾಗಿದ್ದ 25 ಸಾವಿರ ರೂಪಾಯಿ ನಗದು ಹಣವನ್ನು  ಕಳ್ಳರು  ಕಳವುಗೈದಿದ್ದಾರೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2023 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬೋಳಂಗಡಿ ಶಾಲೆಗೆ ನುಗ್ಗಿ ನಗದು ಎಗರಿಸಿದ ಕಳ್ಳರು Rating: 5 Reviewed By: lk
Scroll to Top