ಸುಳ್ಯ, ಆಗಸ್ಟ್ 24, 2023 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಚಾಲಕನನ್ನು ತಡೆದ ತಂಡವೊಂದು ಗಂಭೀರ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಸುಳ್ಯ ನಾಲ್ಕೂರು ಗ್ರಾಮದ ನಿವಾಸಿ ತಸ್ಲೀಮ್ ಕೆ (34) ಎಂಬವರೇ ತಂಡದಿಂದ ಹಲ್ಲೆಗೊಳಗಾದ ಅಟೋ ರಿಕ್ಷಾ ಚಾಲಕ. ತಸ್ಲೀಂ ಅವರು ಬುಧವಾರ ಸಂಜೆ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಗುಂಡಡ್ಕ ಎಂಬಲ್ಲಿಗೆ ತಲುಪಿದಾಗ, ಆರೋಪಿಗಳಾದ ದಯಾನಂದ, ಲೋಕೇಶ್, ಜಯರಾಮ, ಮಂಜು ಎಂಬವರುಗಳು ತಸ್ಲಿಂ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಅಡ್ಡಗಟ್ಟಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಆರೋಪಿಗಳೆಲ್ಲರೂ ಸೇರಿ ರಕ್ತಗಾಯವಾಗುವಂತೆ ಹಲ್ಲೆ ನಡೆಸಿರುತ್ತಾರೆ ಹಾಗೂ ಜೀವ ಬೆದರಿಕೆ ಹಾಕಿರುತ್ತಾರೆ. ತಸ್ಲೀಂ ಆರೋಪಿಗಳ ಪೈಕಿ ದಯಾನಂದ ಎಂಬಾತನ ಸಹೋದರನೊಂದಿಗೆ ಪಾರ್ಟಿ ನಡೆಸಿದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2023 ಕಲಂ 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment