ಸುಳ್ಯ, ಆಗಸ್ಟ್ 31, 2023 (ಕರಾವಳಿ ಟೈಮ್ಸ್) : ತಾಲೂಕಿನ ಜಾಲ್ಸೂರು ಗ್ರಾಮದ ಕರಾವಳಿ ಹೋಟೆಲ್ ಬಳಿ ಕಾರೊಂದು ರಸ್ತೆ ಬದಿ ನಿಂತಿದ್ದ ಕೂಲಿ ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಮೃತಪಟ್ಟ ಕಾರ್ಮಿಕರನ್ನು ಹಾವೇರಿ ಜಿಲ್ಲೆ, ರಾಣಿ ಬೆನ್ನೂರು ತಾಲೂಕು, ಕಾಕೊಳ ತಾಂಡ ಗ್ರಾಮದ ನಿವಾಸಿಗಳಾದ ಚೆನ್ನಪ್ಪ ಹಾಗೂ ರೇಖಪ್ಪ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಮಹಂತಪ್ಪ ಹಾಗೂ ವೆಂಕಪ್ಪ ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಅದೇ ಊರಿನ ನಿವಾಸಿ ಸಹ ಕಾರ್ಮಿಕ ಹುಲಿಯಪ್ಪ ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಗುರುವಾರ ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗುವ ಬಗ್ಗೆ ಸುಳ್ಯ-ಜಾಲ್ಸೂರು ಕರಾವಳಿ ಹೊಟೇಲ್ ಬಳಿ ಇರುವ ವಾಣಿಜ್ಯ ಕಟ್ಟಡದ ಎದುರು ಹುಲಿಯಪ್ಪ ಹಾಗೂ ಅವರ ಜೊತೆ ಸೋಮಪ್ಪ, ಪುಟ್ಟಪ್ಪ, ಚೆನ್ನಪ್ಪ, ರೇಖಪ್ಪ, ಮಹಂತಪ್ಪ, ವೆಂಕಪ್ಪ ಎಂಬವರೊಂದಿಗೆ ಕೆಲಸಕ್ಕೆ ತೆರಳಲು ನಿಂತಿದ್ದ ವೇಳೆ ಕಾರೊಂದು ಚಾಲಕನ ನಿರ್ಲಕ್ಷ್ಯತನದಿಂದ ವೇಗವಾಗಿ ಬಂದು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಚೆನ್ನಪ್ಪ, ರೇಖಪ್ಪ, ಮಹಂತಪ್ಪ, ವೆಂಕಪ್ಪ ಅವರಿಗೆ ಗಾಯಗಳಾಗಿದೆ. ಈ ಪೈಕಿ ಚೆನ್ನಪ್ಪ, ರೇಖಪ್ಪ ಹಾಗೂ ಮಹಂತಪ್ಪ ಅವರಿಗೆ ಗಂಬೀರ ಗಾಯವಾಗಿತ್ತು. ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರಗೆ ಸಾಗಿಸಲಾಗಿದ್ದು, ಅದಾಗಲೇ ಚೆನ್ನಪ್ಪ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ರೇಖಪ್ಪ, ಮಹಂತಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ರೇಖಪ್ಪ ಕೂಡಾ ಮೃತಪಟ್ಟಿರುತ್ತಾರೆ. ಉಳಿದಂತೆ ಗಂಭೀರ ಗಾಯಗೊಂಡ ಮಹಂತಪ್ಪ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2023 ಕಲಂ 279, 337, 338, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment