ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿಗಳಿಂದಲೇ ರೌದ್ರಾವತಾರ : ಆರೋಪಿ ವಿದ್ಯಾರ್ಥಿಗಳ ಸಹಿತ 7 ಮಂದಿಯನ್ನು ದಸ್ತಗಿರಿ ಮಾಡಿದ ಬಂದರು ಪೊಲೀಸರು - Karavali Times ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿಗಳಿಂದಲೇ ರೌದ್ರಾವತಾರ : ಆರೋಪಿ ವಿದ್ಯಾರ್ಥಿಗಳ ಸಹಿತ 7 ಮಂದಿಯನ್ನು ದಸ್ತಗಿರಿ ಮಾಡಿದ ಬಂದರು ಪೊಲೀಸರು - Karavali Times

728x90

26 August 2023

ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿಗಳಿಂದಲೇ ರೌದ್ರಾವತಾರ : ಆರೋಪಿ ವಿದ್ಯಾರ್ಥಿಗಳ ಸಹಿತ 7 ಮಂದಿಯನ್ನು ದಸ್ತಗಿರಿ ಮಾಡಿದ ಬಂದರು ಪೊಲೀಸರು

ಮಂಗಳೂರು, ಆಗಸ್ಟ್ 26, 2023 (ಕರಾವಳಿ ಟೈಮ್ಸ್) : ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲಕ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಫ್ಲ್ಯಾಟ್ ವೊಂದರಲ್ಲಿ ಕೂಡಿ ಹಾಕಿ ಗಂಭೀರ ಗಾಯಗಳಾಗುವಂತೆ ಹಲ್ಲೆ ನಡೆಸಿ ಗೂಂಡಾಯಿಸಂ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂದರು ಪೊಲೀಸರು 6 ಮಂದಿ ವಿದ್ಯಾರ್ಥಿಗಳ ಸಹಿತ 7 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. 

ಆಗಸ್ಟ್ 23 ರಂದು ಮಂಗಳೂರು ನಗರದ ಬಾವುಟಗುಡ್ಡೆ ಸೈಂಟ್ ಎಲೋಶಿಯಸ್ ಕಾಲೇಜು ಸಮೀಪದಲ್ಲಿ ನಿಂತಿದ್ದ ಕೇರಳ ಮೂಲಕ ವಿದ್ಯಾರ್ಥಿಗಳಾದ ಶಾಮೀರ್ ಹಾಗೂ ಇಬ್ರಾಹಿಂ ಫಾಹೀಂ ಎಂಬವರನ್ನು ತಾಬೀಶ್ ಹಾಗೂ ಆತನ ಸಹಚರರು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಬಗ್ಗೆ ಇಬ್ರಾಹಿಂ ಫಾಹಿಂ ನೀಡಿದ ದೂರಿನಂತೆ ಬಂದರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2023 ಕಲಂ 323, 324, 341, 363, 506 ಜೊತೆಗೆ 

149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. 

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬಂದರು ಪೊಲೀಸರು ಆರೋಪಿತರಾದ ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಹನೀಫ್ ಅವರ ಪುತ್ರ ಇಬ್ರಾಹೀಂ ತಾಬೀಶ್ (19), ಬಿ ಮೂಡ ಗ್ರಾಮದ ಗೂಡಿನಬಳಿ ನಶ್ರತ್ ಕಾಟೇಜ್ ನಿವಾಸಿ ಅಬ್ದುಲ್ಲಾ ಹನ್ನಾನ್ ಯಾನೆ ಹನ್ನಾನ್ (19), ಸಜಿಪಮುನ್ನೂರು ಗ್ರಾಮದ ನಂದಾವರ-ಕೋಟೆ ನಿವಾಸಿ ಇಬ್ರಾಹಿಂ ಅವರ ಪುತ್ರ ಮುಹಮ್ಮದ್ ಶಾಕೀಫ್ (19), ಬಂಟ್ವಾಳ ಸಮೀಪದ ಬಡ್ಡಕಟ್ಟೆ ನಿವಾಸಿ ಮುಹಮ್ಮದ್ ರಫೀಕ್ ಅವರ ಪುತ್ರ ಮೊಹಮ್ಮದ್ ಶಾಹೀಕ್ (19), ಬಜಾಲ್-ನಂತೂರು, ಶಾಂತಿನಗರ ನಿವಾಸಿ ದಿವಂಗತ ಯು ಪಿ ಮುಹಮ್ಮದ್ ಅವರ ಪುತ್ರ ಯು ಪಿ ತನ್ವೀರ್ (20), ಬಜಾಲ್-ಫೈಸಲ್ ನಗರ ನಿವಾಸಿ ಮುಹಮ್ಮದ್ ನಾಸೀರ್ ಅವರ ಪುತ್ರ ಅಬ್ದುಲ್ ರಶೀದ್ (19), ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಬಿ ಸುಲೇಮಾನ್ ಅವರ ಪುತ್ರ ಮನ್ಸೂರ್ (37) ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.

ಒಂದು ಕಾಲೇಜಿನ ವಿದ್ಯಾರ್ಥಿಗಳು ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳನ್ನು ಯಾವ ಕಾರಣಕ್ಕೆ ಅಪಹರಿಸಿ ಹಲ್ಲೆ ಮಾಡಲಾಗಿದೆ. ವಿದ್ಯಾರ್ಥಿಗಳ ಗೂಂಡಾಯಿಸಂ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಇದೆಯೇ ಅಥವಾ ಇನ್ಯಾವುದೇ ಕಾರಣದ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ. 

ಸಾವಿರಾರು, ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ನಗರದ ಪ್ರತಿಷ್ಠಿತ ಕಾಲೇಜುಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿ ಸಮಾಜದಲ್ಲಿ ಏನಾದರೂ ಉತ್ತಮ ಸಾಧನೆ ಮಾಡಲಿ ಎಂಬ ಭರವಸೆ ಇಟ್ಟರೆ, ವಿದ್ಯಾರ್ಥಿಗಳು ಮಾತ್ರ ಇಂತಹ ಮಾಡಬಾರದ್ದನ್ನು ಮಾಡಿ ಪೊಲೀಸ್ ಠಾಣೆ, ಕೋರ್ಟು, ಕಚೇರಿಗಳಿಗೆ ದೌಡಾಯಿಸುವ ಪರಿಸ್ಥಿತಿ ಬರುತ್ತಿರುವುದರ ಬಗ್ಗೆ ಮಾತ್ರ ನಾಗರಿಕ ಸಮಾಜ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಗಳು ಹಾಗೂ ಪೊಲೀಸರು ಇಂತಹ ಕೃತ್ಯಗಳ ಬಗ್ಗೆ ಕಠಿಣ ಕ್ರಮ ಕೈಗೊಂಡಾಗ ಮಾತ್ರ ಮುಂದೆ ಇಂತಹ ಘಟನೆಗಳು ಮರುಕಳಿಸಿ ವಿದ್ಯಾವಂತ ಸಮಾಜ ದಾರಿ ತಪ್ಪುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯ ನಾಗರಿಕ ಸಮಾಜದಿಂದ ಕೇಳಿ ಬರುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿಗಳಿಂದಲೇ ರೌದ್ರಾವತಾರ : ಆರೋಪಿ ವಿದ್ಯಾರ್ಥಿಗಳ ಸಹಿತ 7 ಮಂದಿಯನ್ನು ದಸ್ತಗಿರಿ ಮಾಡಿದ ಬಂದರು ಪೊಲೀಸರು Rating: 5 Reviewed By: karavali Times
Scroll to Top