ಬಂಟ್ವಾಳ, ಆಗಸ್ಟ್ 13, 2023 (ಕರಾವಳಿ ಟೈಮ್ಸ್) : 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ನೈಜ್ಯ ಆರೋಪಿಯನ್ನು ಬಂಧಿಸಬೇಕೆಂದು ಎಲ್ಲೆಡೆ ಪ್ರತಿಭಟನಾ ಕೂಗು ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಆಗಸ್ಟ್ 27 ರಂದು ವಾಮದಪದವಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ವಾಮದಪದವು ನೀಲಿ ನೀಲಕಂಠೇಶ್ವರ ದೇವಸ್ಥಾನದಿಂದ ವಾಹನ ಜಾಥ ಹೊರಟು ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ಸೌಜನ್ಯ ಸಾವಿನ ಪೂರ್ಣ ಪ್ರಮಾಣದ ತನಿಖೆಗೆ ಹೋರಾಟ ನಡೆಯಲಿದೆ ಎಂದು ವಾಮದಪದವು ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.
0 comments:
Post a Comment