ಬಂಟ್ವಾಳ, ಆಗಸ್ಟ್ 27, 2023 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಕೈಕಂಬ ಶ್ರೀ ರಾಮ ಗೆಳೆಯರ ಬಳಗದ ನೂತನ ಸಾಲಿನ ಅಧ್ಯಕ್ಷರಾಗಿ ಸದಾಶಿವ ಕೈಕಂಬ ಮರು ಆಯ್ಕೆಯಾಗಿದ್ದಾರೆ.
ಭಾನುವಾರ (ಆ 27) ಸಂಘದ ಸಭಾ ಭವನದಲ್ಲಿ ಹರೀಶ್ ಪಣೆಕಲಪಡ್ಪು ಅವರ ಅಧ್ಯಕ್ಷತೆಯಲ್ಲಿ ನಡೆದ ಬಳಗದ 36ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಗೌರವಾಧ್ಯಕ್ಷರಾಗಿ ಸುರೇಶ್ ಕುಮಾರ್, ಸಲಹೆಗಾರರಾಗಿ ಹರೀಶ್ ಪಣೆಕಲಪಡ್ಪು, ಉಪಾಧ್ಯಕ್ಷರಾಗಿ ರಮೇಶ್ ಕೊಡಂಗೆ, ಕಾರ್ಯದರ್ಶಿಯಾಗಿ ಅಕ್ಷಯ್ ಸಾಲಿಯಾನ್, ಜೊತೆ ಕಾರ್ಯದರ್ಶಿಯಾಗಿ ವಿಕೇಶ್ ಸುವರ್ಣ, ಲೆಕ್ಕಪರಿಶೋಧಕರಾಗಿ ತಾರಾನಾಥ್ ಕುಲಾಲ್, ಜಗದೀಶ್, ಸಂಘಟನಾ ಕಾರ್ಯದರ್ಶಿಗಳಾಗಿ ಶಶಿ ಪೂಜಾರಿ, ಸುರೇಶ್ ಪೂಜಾರಿ, ಸಂಘಟನಾ ಸದಸ್ಯರಾಗಿ ನಾಗೇಂದ್ರ ನಾಯಕ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲೋಕೇಶ್ ಪರ್ಲಿಯ, ಉಮೇಶ್ ಬಂಗೇರ ಕೊಡಂಗೆ, ಸುಬ್ರಹ್ಮಣ್ಯ ಮಿತ್ತ ಪರಾರಿ, ರಾಜೇಶ್ ಮೈರ, ಕರುಣಾಕರ ಶೆಟ್ಟಿ, ವಸಂತ ಪೂಜಾರಿ, ಹೇಮಂತ್ ಬಂಟ್ವಾಳ, ವಿಶ್ವನಾಥ ಬಂಟ್ವಾಳ, ಶೈಲೇಶ್ ಕೈಕಂಬ, ನವೀನ್ ಕುಲಾಲ್, ಉಮೇಶ್ ಕಲ್ಲಡ್ಕ, ಸತ್ಯೇಂದ್ರ, ಯೋಗೀಶ್ ಕೈಕಂಬ, ಸಚಿನ್ ಸಹಿತ ಇತರ 14 ಮಂದಿಯನ್ನು ಆರಿಸಲಾಗಿದೆ.
0 comments:
Post a Comment