ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಬೈಪಾಸಿನ ಎಸ್.ಆರ್. ಬೇಕರ್ಸ್ ಟ್ರೀಟ್ ಕೆಫೆ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಕ್ವಿಝ್ ಸ್ಪರ್ಧೆಯ ಫಲಿತಾಂಶ ಸ್ವಾತಂತ್ರ್ಯ ದಿನದಂದು ಘೋಷಿಸಲಾಗಿದ್ದು, ತೊಕ್ಕೊಟ್ಟು ಅಸ್ಸಹದಾ ಇಸ್ಲಾಮಿಕ್ ಪ್ರಿ-ಸ್ಕೂಲ್ ವಿದ್ಯಾರ್ಥಿನಿ ಹಾಜಿರಾ ಇಲ್ಹಾಮ್ ಫಾತಿಮಾ ಪ್ರಥಮ ಬಹುಮಾನ ಗೆದ್ದುಕೊಂಡರೆ, ಬಂಟ್ವಾಳ-ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಲ್ಮಾ ತಹಾನಿ ದ್ವಿತೀಯ ಹಾಗೂ ಗೂಡಿನಬಳಿ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸೆಫಿಯಾ ಹಮ್ನಾ ತೃತೀಯ ಬಹುಮಾನ ಗೆದ್ದುಕೊಂಡಿದ್ದಾರೆ.
ವಿಜೇತ ವಿದ್ಯಾರ್ಥಿನಿಯರಿಗೆ ನರಿಕೊಂಬು ಗ್ರಾ ಪಂ ಅಭಿವೃದ್ದಿ ಅಧಿಕಾರಿ ಶಿವು ಬಿರಾದಾರ್, ಅಲ್-ಶಿಫಾ ನರ್ಸಿಂಗ್ ಹೋಂ ವೈದ್ಯಾಧಿಕಾರಿ ಡಾ ಎಂ ಎಂ ಶರೀಫ್ ಹಾಗೂ ಬಂಟ್ವಾಳ ಮೆಸ್ಕಾಂ ಎ.ಎಲ್.ಎಂ. ಬಸು ಅವರು ಬಹುಮಾನ ವಿತರಿಸಿ ಅಭಿನಂದಿಸಿದರು.
ಈ ಸಂದರ್ಭ ಸಂಸ್ಥೆಯ ಮಾಲಕ ಪಾಲುದಾರರಾದ ರಿಯಾಝ್ ಅಬ್ದುಲ್ ಖಾದರ್ ಹಾಗೂ ಶರೀಕ್ ಆಲಡ್ಕ ಉಪಸ್ಥಿತರಿದ್ದರು. ಕ್ವಿಝ್ ಸ್ಪರ್ಧೆಯಲ್ಲಿ 42 ಶಾಲೆಗಳ ಸುಮರು 186 ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 comments:
Post a Comment