ಪುತ್ತೂರು, ಆಗಸ್ಟ್ 24, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರದ ಮಹಿಳಾ ಪೆÇಲೀಸ್ ಠಾಣೆ ಬಳಿ ಯುವಕನೋರ್ವ ಯುವತಿಯೋರ್ವಳಿಗೆ ಚೂರಿಯಿಂದ ಇರಿದು ಕೊಂದ ಘಟನೆ ಗುರುವಾರ ನಡೆದಿದೆ.
ಮೃತ ಯುವತಿಯನ್ನು ವಿಟ್ಲ ಸಮೀಪದ ಅಳಿಕೆ ನಿವಾಸಿ ಗೌರಿ (19) ಎಂದು ಗುರುತಿಸಲಾಗಿದ್ದು, ಆರೋಪಿ ಯುವಕನನ್ನು ಬಂಟ್ವಾಳ ಸಮೀಪದ ಮಾವಿನಕಟ್ಟೆ ನಿವಾಸಿ ಪದ್ಮರಾಜ್ ಎಂದು ಹೆಸರಿಸಲಾಗಿದೆ. ಗುರುವಾರ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಯುವಕ ಏಕಾಏಕಿ ಚೂರಿಯಿಂದ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ರಸ್ತೆಗೆ ಬಿದ್ದ ಗೌರಿಯನ್ನು ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಯುವತಿ ಕೊನೆಯುಸಿರೆದಿದ್ದಾಳೆ ಎನ್ನಲಾಗಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಕಾರಣ ಏನೆಂಬು ಪೊಲೀಸ್ ತನಿಖೆಯ ಬಳಿಕವಷ್ಟೆ ಗೊತ್ತಾಗಲಿದೆ.
0 comments:
Post a Comment