ಪುತ್ತೂರು, ಆಗಸ್ಟ್ 21, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರದ ನೆಲದಲ್ಲಿ ಅಳವಡಿಸಲಾಗಿದ್ದ ಬಿ ಎಸ್ ಎನ್ ಎಲ್ ಕೇಬಲ್ ಕಳವುಗೈದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಬಿ ಎಸ್ ಎನ್ ಎಲ್ ದೂರವಾಣಿ ವಿನಿಮಯ ಕೇಂದ್ರದ ಉಪವಿಭಾಗೀಯ ಅಭಿಯಂತರ ಜ್ಯೋತಿ ಡಿ ಎಂ ಅವರು ಈ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದು, ಪುತ್ತೂರು ನಗರದ ದರ್ಬೆ, ಹನುಮವಾಡಿಯ ಹತ್ತಿರದ ಪುಷ್ಪಾಂಜಲಿ ಹಾಲ್ ಬಳಿ ನೆಲದಲ್ಲಿ ಅಳವಡಿಸಿದ್ದ ತಾಮ್ರದ 20 ಮೀಟರ್ ಉದ್ದದ 200 ಜೊತೆ ಬಿ ಎಸ್ ಎನ್ ಎಲ್ ಕೇಬಲನ್ನು ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನ ಮಧ್ಯದ ಅವಧಿಯಲ್ಲಿ ಕಳ್ಳರು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2023 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment