ಬಂಟ್ವಾಳ, ಆಗಸ್ಟ್ 17, 2023 (ಕರಾವಳಿ ಟೈಮ್ಸ್) : ಮೊಬೈಲ್ ಮೂಲಕ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಲ್ಲದೆ ಬಳಿಕ ಮನೆಗೆ ಅಕ್ರಮ ಪ್ರವೇಶಗೈದು ಮನೆ ಮಂದಿಗೆ ಹಲ್ಲೆ ನಡೆಸಿದ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ತಾಲೂಕು, ಪುತ್ತಿಲ ಗ್ರಾಮದ ನಿವಾಸಿ ಯಶೋಧ (52) ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಬುಧವಾರ (ಆ 16) ಮಧ್ಯಾಹ್ನದ ವೇಳೆ ಯಶೋಧ ಅವರು ಮನೆಯಲ್ಲಿದ್ದಾಗ ಆರೋಪಿ ಚಂದ್ರಶೇಖರ ಶೆಟ್ಟಿ ಎಂಬಾತ ಮೊಬೈಲಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿರುತ್ತಾನೆ. ಅದಾದ ಸ್ವಲ್ಪ ಸಮಯದ ಬಳಿಕ ಆರೋಪಿಯು ತನ್ನ ಮೋಟಾರು ಸೈಕಲಿನಲ್ಲಿ ಯಶೋಧ ಅವರ ಮನೆಗೆ ಬಂದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಯಶೋಧ, ಅವರ ಮಗ ಹಾಗೂ ಗಂಡನಿಗೆ ಕೈಯಿಂದ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಮನೆಯ ಬಾಗಿಲನ್ನು ಮುರಿದು ಮನೆಯೊಳಗಿರುವ ಶೋಕೇಸಿಗೆ ಹಾನಿ ಮಾಡಿ ತೆರಳಿದ್ದಾನೆ. ಹಲ್ಲೆಯಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2023 ಕಲಂ 448, 323, 324, 427, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment