ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜಕೀಯ ಪ್ರೇರಿತ ವ್ಯಕ್ತಿಗಳಿಂದ ಜಮೀನಿಗೆ ಅಕ್ರಮ ಪ್ರವೇಶ : ಮಾಲಕ ಪ್ರಸನ್ನ ಕಾಮತ್ ಆರೋಪ - Karavali Times ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜಕೀಯ ಪ್ರೇರಿತ ವ್ಯಕ್ತಿಗಳಿಂದ ಜಮೀನಿಗೆ ಅಕ್ರಮ ಪ್ರವೇಶ : ಮಾಲಕ ಪ್ರಸನ್ನ ಕಾಮತ್ ಆರೋಪ - Karavali Times

728x90

16 August 2023

ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜಕೀಯ ಪ್ರೇರಿತ ವ್ಯಕ್ತಿಗಳಿಂದ ಜಮೀನಿಗೆ ಅಕ್ರಮ ಪ್ರವೇಶ : ಮಾಲಕ ಪ್ರಸನ್ನ ಕಾಮತ್ ಆರೋಪ

ಬಂಟ್ವಾಳ, ಆಗಸ್ಟ್ 16, 2023 (ಕರಾವಳಿ ಟೈಮ್ಸ್) : ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೆಕ್ಕಾನ ಎಂಬಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸುವ ನೆಪದಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ರಾಜಕೀಯ ಪ್ರೇರಿತ ಹೊರಗಿನ ವ್ಯಕ್ತಿಗಳಾದ ಪುಷ್ಪರಾಜ ಚೌಟ, ದಿನೇಶ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಸುಬ್ರಹ್ಮಣ್ಯ ಭಟ್, ಗಣೇಶ ರೈ ಮಾಣಿ, ನಾರಾಯಣ ಭಟ್, ನಾರಾಯಣ ಶೆಟ್ಟಿ, ಎಡ್ವರ್ಡ್ ಮಾರ್ಟಿಸ್, ವಾಲ್ಟರ್ ಮಸ್ಕರೇನಸ್, ಚೆನ್ನಪ್ಪ ಮೂಲ್ಯ, ರಾಧ, ಸುಬ್ಬಣ್ಣ ಆಮ್ಲಿ, ಸುರೇಶ ಪೂಜಾರಿ, ಹರೀಶ್ಚಂದ್ರ, ಮಾಧವ, ಶಿವಪ್ಪ ಪೂಜಾರಿ ಎಂಬವರು ಅಕ್ರಮ ಪ್ರವೇಶಿಸಿ ಕುಮ್ಕಿ ಜಮೀನಿನಲ್ಲಿ ಜೆಸಿಬಿ ಬಳಸಿ ಕಾಮಗಾರಿಗೆ ಯತ್ನಿಸಿದ್ದಾರೆ ಎಂದು ಜಮೀನು ಮಾಲಕ ಕೆ ಪ್ರಸನ್ನ ಕಾಮತ್ ಆರೋಪಿಸಿದರು. 

ಬಿ ಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಜಮೀನಿಗೆ ಸಂಬಂಧಿಸಿ ಮಂಗಳೂರು ಜಿಲ್ಲಾಧಿಕಾರಿ ಅವರು ಇಡಿಸ್ ಸಂಖ್ಯೆ ಎಲ್ ಎನ್ ಡಿ (2) ಸಿ ಆರ್ 246/2023/ ಇ234831/ಬಿ3 ದಿನಾಂಕ 29-05-2023ರಲ್ಲಿ ಹೊರಡಿಸಿದ ಆದೇಶ ಪ್ರಕಾರ ಸಿವಿಲ್/ ಮುನ್ಸಿಪ್ ನ್ಯಾಯಾಲಯದಲ್ಲಿರುವ ಪ್ರಕರಣ ಮುಕ್ತಾಯವಾಗುವವರೆಗೂ ಪ್ರಸ್ತಾವಿತ ಜಮೀನು ಪ್ರಸನ್ನ ಕಾಮತ್ ಅವರ ಸೊತ್ತು ಎಂದು ಭಾವಿಸಿ ಸಿವಿಲ್ ನ್ಯಾಯಾಲಯದಲ್ಲಿ ಆಗುವ ತೀರ್ಮಾನಕ್ಕೆ ಒಳಪಟ್ಟು ಕ್ರಮವಹಿಸಲು ಆದೇಶಿಸಿದ್ದಾರೆ ಹಾಗೂ ಸದ್ರಿ ಆದೇಶ ಊರ್ಜಿತದಲ್ಲಿರುತ್ತದೆ. 

ಈ ಆದೇಶ ಜಾರಿಯಲ್ಲಿರುವ ವಿಷಯ ಗೊತ್ತಿದ್ದರೂ ನಮ್ಮ ಖಾಸಗಿ ಜಮೀನಿಗೆ ಅಕ್ರಮ ಪ್ರವೇಶಿಸಿದ ಆರೋಪಿತ ವ್ಯಕ್ತಿಗಳು ಕುಮ್ಕಿ ಜಮೀನಿನಲ್ಲಿ ಜೆಸಿಬಿ ಮೂಲಕ ಅಗೆದು ರಸ್ತೆ ನಿರ್ಮಿಸಲು ಮುಂದಾಗಿದೆ ಎಂದವರು ಆರೋಪಿಸಿದ್ದಾರೆ. 

ರಾಜಕೀಯ ಪ್ರೇರಿತವಾಗಿ ಆರೋಪಿತ ವ್ಯಕ್ತಿಗಳು ಈ ರೀತಿ ಅಕ್ರಮ ಪ್ರವೇಶ ಮಾಡಿ ನಮ್ಮ ಕುಮ್ಕಿ ಜಮೀನಿನಲ್ಲಿ ಕಿರಿಕ್ ಉಂಟುಮಾಡುತ್ತಿದ್ದು, ಇದು ಜಿಲ್ಲಾಧಿಕಾರಿ ಆದೇಶದ ಉಲ್ಲಂಘನೆಯಾಗಿದೆ. ಇದು ಖಂಡನೀಯ ಹಾಗೂ ಕಾನೂನು ಬಾಹಿರವಾಗಿರುತ್ತದೆ ಎಂದು ಪ್ರಸನ್ನ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರಕಾಶ್ ಕಾಮತ್, ಪುರುಷೋತ್ತಮ ಕಾಮತ್, ಪೃಥ್ವಿ ಕಾಮತ್ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜಕೀಯ ಪ್ರೇರಿತ ವ್ಯಕ್ತಿಗಳಿಂದ ಜಮೀನಿಗೆ ಅಕ್ರಮ ಪ್ರವೇಶ : ಮಾಲಕ ಪ್ರಸನ್ನ ಕಾಮತ್ ಆರೋಪ Rating: 5 Reviewed By: karavali Times
Scroll to Top