ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ಶಾಲಾ ಬಾಲಕಿಯೊಬ್ಬಳ ಕೈ ಹಿಡಿದೆಳೆದ ಆರೋಪದಲ್ಲಿ ಸರಪಾಡಿ ಗ್ರಾಮದ ಕುದ್ಕುಂಜ ನಿವಾಸಿ ಸುಕೇಶ್ ಯಾನೆ ಸಿಕೇಶ ಎಂಬಾತನ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಬಾಲಕಿಯೊಬ್ಬಳು ಏಕಾಂಗಿಯಾಗಿ ಶಾಲೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಆರೋಪಿ ಸುಕೇಶ್ ಬಾಲಕಿಯ ಹಿಂದಿ£ಂದ ಬಂದು ಬಾಲಕಿಯ ಕೈ ಹಿಡಿದು ಎಳೆದು ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಈ ಹಿಂದೆಯೂ ಇಂತಹದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಈತನ ಮೇಲೆ ಮೊದಲೇ ಸಂಶಯಿತರಾಗಿದ್ದ ಸ್ಥಳೀಯರು ಈತನನ್ನು ಈ ಬಾರಿ ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
0 comments:
Post a Comment