ಕಲ್ಲಡ್ಕ-ಕೆ.ಸಿ.ರೋಡು ಗ್ಯಾರೇಜಿನಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ವಾಹನ ಕಳವು : ಪೊಲೀಸ್ ದೂರು ದಾಖಲು - Karavali Times ಕಲ್ಲಡ್ಕ-ಕೆ.ಸಿ.ರೋಡು ಗ್ಯಾರೇಜಿನಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ವಾಹನ ಕಳವು : ಪೊಲೀಸ್ ದೂರು ದಾಖಲು - Karavali Times

728x90

23 August 2023

ಕಲ್ಲಡ್ಕ-ಕೆ.ಸಿ.ರೋಡು ಗ್ಯಾರೇಜಿನಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ವಾಹನ ಕಳವು : ಪೊಲೀಸ್ ದೂರು ದಾಖಲು

ಬಂಟ್ವಾಳ, ಆಗಸ್ಟ್ 23, 2023 (ಕರಾವಳಿ ಟೈಮ್ಸ್) : ಗೋಳ್ತಮಜಲು ಗ್ರಾಮದ ಕಲ್ಲಡ್ಕ-ಕೆ ಸಿ ರೋಡು ಗ್ಯಾರೇಜಿನಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ವಾಹನವನ್ನು ಕಳವು ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮಾಣಿ ನಿವಾಸಿ ನವೀನ ಅವರು ಆಗಸ್ಟ್ 18 ರಂದು ಸಂಜೆ ಕೆ ಸಿ ರೋಡ್ ಗ್ಯಾರೇಜಿನಲ್ಲಿ ಪಿಕಪ್ ವಾಹನ ನಿಲ್ಲಿಸಿ ಮನೆಗೆ ಹೋಗಿದ್ದರು. ಆ 22 ರಂದು ಬೆಳಿಗ್ಗೆ ಬಂದು ನೋಡಿದಾಗ ಮಹೀಂದ್ರ ಪಿಕಪ್ ವಾಹನ ಕಳವಾಗಿರುವುದು ಗಮನಕ್ಕೆ ಬಂದಿದೆ. ಕಳವಾಗಿರುವ ಪಿಕಪ್ ವಾಹನದ ಅಂದಾಜು ಮೌಲ್ಯ 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ-ಕೆ.ಸಿ.ರೋಡು ಗ್ಯಾರೇಜಿನಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ವಾಹನ ಕಳವು : ಪೊಲೀಸ್ ದೂರು ದಾಖಲು Rating: 5 Reviewed By: karavali Times
Scroll to Top