ಮಾಣಿ ಮೇಲ್ಸೇತುವೆ ಕಾಮಗಾರಿಗೆ ತಂದಿಟ್ಟಿದ್ದ ರಾಡ್, ಪ್ಲೇಟ್ ಸಾಮಾಗ್ರಿ ಕಳವು : ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಮಾಣಿ ಮೇಲ್ಸೇತುವೆ ಕಾಮಗಾರಿಗೆ ತಂದಿಟ್ಟಿದ್ದ ರಾಡ್, ಪ್ಲೇಟ್ ಸಾಮಾಗ್ರಿ ಕಳವು : ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

8 August 2023

ಮಾಣಿ ಮೇಲ್ಸೇತುವೆ ಕಾಮಗಾರಿಗೆ ತಂದಿಟ್ಟಿದ್ದ ರಾಡ್, ಪ್ಲೇಟ್ ಸಾಮಾಗ್ರಿ ಕಳವು : ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಆಗಸ್ಟ್ 08, 2023 (ಕರಾವಳಿ ಟೈಮ್ಸ್) : ಕೆ ಎನ್ ಆರ್ ಕನ್ಸ÷್ಟಕ್ಷನ್ ಕಂಪೆನಿಯವರು ಮಾಣಿಯಲ್ಲಿ ನಿರ್ವಹಿಸುತ್ತಿರುವ ಮೇಲ್ಸೇತುವೆ ನಿಮಾಣ ಕಾಮಗಾರಿಗೆ ತಂದಿಡಲಾಗಿದ್ದ ರಾಡುಗಳು, ಪ್ಲೇಟುಗಳು ಹಾಗೂ ಸಾಮಗ್ರಿಗಳನ್ನು ಈಚರ್ ವಾಹನದಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 



ಈ ಬಗ್ಗೆ ಕಂಪೆನಿಯ ಪಿ ಆರ್ ಒ ಬಿಮೂಡ ಗ್ರಾಮದ ನಿವಾಸಿ ಆರ್ ನಂದಕುಮಾರ್ ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಗಸ್ಟ್ 6 ರಂದು ಮಾಣಿ ಮೇಲ್ಸೇತುವೆ ಕಾಮಗಾರಿಗಾಗಿ ತಂದು ಹಾಕಲಾಗಿದ್ದ ರಾಡುಗಳು, ಪ್ಲೇಟ್‌ಗಳು ಹಾಗೂ ಇತರ ಕಾಮಗಾರಿ ಸಾಮಾಗ್ರಿಗಳು ಆಗಸ್ಟ್ 7 ರಂದು ಮಧ್ಯಾಹ್ನ ನೋಡುವಾಗ ಕಳವಾಗಿತ್ತು. ಈ ಬಗ್ಗೆ ಹುಡುಕಾಡಿದಾಗ ಮಾಣಿ ಗ್ರಾಮದ ಪಟ್ಲಕೋಡಿಯಲ್ಲಿ ಈಚರ್ ವಾಹನದಲ್ಲಿ ಆರೋಪಿ ತುಂಬಿಸಿಕೊAಡಿರುವುದು ಕಂಡುಬAದಿದೆ. ಪಿ ಆರ್ ಒ ನಂದಕುಮಾರ್ ಅವರನ್ನು ಕಂಡ ಆರೋಪಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ಕಳ್ಳತನವಾದ ಸಾಮಗ್ರಿಗಳು 5 ಟನ್ ಗಳಾಗಿದ್ದು, ಅಂದಾಜು ಮೌಲ್ಯ 3.50 ಲಕ್ಷ ರೂಪಾಯಿ ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾಣಿ ಮೇಲ್ಸೇತುವೆ ಕಾಮಗಾರಿಗೆ ತಂದಿಟ್ಟಿದ್ದ ರಾಡ್, ಪ್ಲೇಟ್ ಸಾಮಾಗ್ರಿ ಕಳವು : ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top