ಬಂಟ್ವಾಳ, ಆಗಸ್ಟ್ 15, 2023 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆ ನೂರುಲ್ ಹುದಾ ಮದ್ರಸಾ ವತಿಯಿಂದ ದೇಶದ 76ನೇ ಸ್ವಾತಂತ್ರ್ಯ ದಿನಾಚರಣೆ ಮದ್ರಸಾ ಸಭಾಂಗಣದಲ್ಲಿ ಆಚರಿಸಲಾಯಿತು.
ಮದ್ರಸಾ ಅಧ್ಯಕ್ಷ ಅಬೂಬಕ್ಕರ್ ಧ್ವಜಾರೋಹಣಗೈದರು. ಮಸೀದಿ ಖತೀಬ್ ಖತೀಬ್ ಉನೈಸ್ ಸಖಾಫಿ ಅಲ್-ಅಫ್‍ಳಲಿ, ಮುಖ್ಯ ಶಿಕ್ಷಕ ಹುಸೈನ್ ಸಅದಿ ಕುಕ್ಕಿಲ, ಪ್ರಧಾನ ಕಾರ್ಯದರ್ಶಿ ಮುಶ್ತಾಕ್ ಬೇಗ್, ಪದಾಧಿಕಾರಿಗಳಾದ ಮಹಮ್ಮದ್, ಅಬ್ದುಲ್ ರಹಿಮಾನ್, ಮದ್ರಸಾ ಉಸ್ತುವಾರಿ ಹಾಗೂ ಪಂಚಾಯತ್ ಸದಸ್ಯ ಹಸೈನಾರ್ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ’ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಮದ್ರಸಾ ಉಸ್ತುವಾರಿಗಳಾದ ಅದ್ರಾಮಚ್ಚ ಕೊಪ್ಪಳ ಮತ್ತು ಹಸೈನಾರ್ ವಿತರಿಸಿದರು.
0 comments:
Post a Comment