ಮಂಗಳೂರು, ಆಗಸ್ಟ್ 16, 2023 (ಕರಾವಳಿ ಟೈಮ್ಸ್) : ನಗರದ ಜೆಪ್ಪು ವಿಶ್ವಾಸ್ ವೀನಸ್ ಅಪಾರ್ಟ್‍ಮೆಂಟ್ ವತಿಯಿಂದ ದೇಶದ 76ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜ ಧ್ವಜಾರೋಹಣಗೈದರು. ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಭಾಸ್ಕರ ರೈ ಸಂದೇಶ ನೀಡಿದರು. ವಿಶ್ವಾಸ್ ವೀನಸ್ ಅಧ್ಯಕ್ಷ ಫಕೀರಬ್ಬ ಪ್ರಸ್ತಾವಿಕ ಭಾಷಣಗೈದರು. ಮನಪಾ ಸದಸ್ಯೆ ಭಾನುಮತಿ, ಶಕ್ತಿ ಕೇಂದ್ರ 58 ರ ಪ್ರಮುಖ ಮಹೇಶ್, ವಿಶ್ವಾಸ್ ವೀನಸ್ ಉಪಾಧ್ಯಕ್ಷೆ ಬಬಿತಾ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್, ಕೋಶಾಧಿಕಾರಿ ಆಶಿಕಾ, ಜೊತೆ ಕಾರ್ಯದರ್ಶಿ ಶಶಿಕಾಂತ್ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಭಬಿತಾ ವಂದಿಸಿ, ಸೌಮ್ಯ ಮತ್ತು ಆಶಿಕಾ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment