ಬಂಟ್ವಾಳ, ಆಗಸ್ಟ್ 11, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿಯಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ಶುಕ್ರವಾರ ಮಧ್ಯಾಹ್ನ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಎಂಡಿಎಂಎ ಮಾದಕ ವಸ್ತು ಸೇವಿಸಿ ಕಾರಿನಲ್ಲಿ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿ ಕಾರು, ಮಾದಕ ವಸ್ತು ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬೋಳಂತೂರು ನಿವಾಸಿ ಮುಹಮ್ಮದ್ ಆಸೀರ್ (26) ಎಂದು ಹೆಸರಿಸಲಾಗಿದೆ. ಗೂಡಿನಬಳಿ ಮಾರ್ಗವಾಗಿ ಬರುತ್ತಿದ್ದ ಮಾರುತಿ ಆಲ್ಟೋ ಕಾರನ್ನು ನಿಲ್ಲಿಸಿ ಪೊಲೀಸರು ಪರಿಶೀಲಿಸಿದಾಗ, ಕಾರಿನ ಚಾಲಕ ಮಾದಕದ್ರವ್ಯ ಸೇವನೆ ಮಾಡಿರುವ ಬಗ್ಗೆ ಅನುಮಾನದಿಂದ ಆತನನ್ನು ವಿಚಾರಿಸಿದ ವೇಳೆ ತಾನು MDMA ನಿದ್ರಾಜನಕ ಸೊತ್ತನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ 8 ಸಾವಿರ ರೂಪಾಯಿ ಮೌಲ್ಯದ 4 ಗ್ರಾಂ 20 ಮೀ.ಗ್ರಾಂ MDMA ಪತ್ತೆಯಾಗಿದೆ. ಅರೋಪಿಯನ್ನು ಮಾದಕ ವಸ್ತು ಹಾಗೂ ಕಾರು ಸಹಿತವಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 78/2023 ಕಲಂ 8(C), 22(b) NDPS Act ನಂತೆ ಪ್ರಕರಣ ದಾಖಲಾಗಿದೆ.
0 comments:
Post a Comment