ಬಂಟ್ವಾಳ, ಆಗಸ್ಟ್ 29, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿಯ ಲಯನ್ಸ್ ಸೇವಾ ಮಂದಿರದ ಪಾರ್ಕ್ ಎದುರುಭಾಗದಲ್ಲಿ ಮಂಗಳವಾರ ಕಾರು ಡಿಕ್ಕಿಯಾದ ಪರಿಣಾಮ ಅಟೋ ರಿಕ್ಷಾ ಚಾಲಕ ಗಂಭಿರ ಗಾಯಗೊಂಡಿದ್ದಾರೆ.
ಗಾಯಾಳು ಅಟೋ ರಿಕ್ಷಾ ಚಾಲಕನನ್ನು ಪಾಣೆಮಂಗಳೂರು ನಿವಾಸಿ ಮಹಮ್ಮದ್ ಸಾದಿಕ್ ಎಂದು ಹೆಸರಿಸಲಾಗಿದ್ದು, ಆತನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಟೋದಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಿ ಸಿ ರೋಡಿನಿಂದ ಪ್ರಯಾಣಿಕರನ್ನು ಕೂರಿಸಿಕೊಂಡು ಬರುತ್ತಿದ್ದ ಅಟೋ ರಿಕ್ಷಾಕ್ಕೆ ಪಾಣೆಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಹಾಗೂ ರಿಕ್ಷಾಗಳೆರಡೂ ಪೂರ್ಣ ಪ್ರಮಾಣದಲ್ಲಿ ಜಖಂಗೊಂಡಿದೆ. ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಉಬೈದುಲ್ಲಾ ವಿರುದ್ದ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment