ಉಪ್ಪಿನಂಗಡಿ, ಆಗಸ್ಟ್ 13, 2023 (ಕರಾವಳಿ ಟೈಮ್ಸ್) : ಮೈಸೂರಿನಿಂದ ಮಂಗಳೂರಿಗೆ ಲಾರಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಲಾರಿ ಗಾಂಜಾ ಸಹಿತ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಶುಕ್ರವಾರ (ಆ 11) ರಾತ್ರಿ ಕೆಎ-13-ಸಿ-8510ನೇ ಲಾರಿಯಲ್ಲಿ ಅದರ ಚಾಲಕ ರಾಘವೇಂದ್ರ ಅಮೀನ್ ಎಂಬಾತ ಮಾದಕವಸ್ತು ಗಾಂಜಾವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಮೈಸೂರಿನ ಆಲಿ ಮೊಹಮ್ಮದ್ @ ಸಲೀಂ ಮೈಸೂರು ಎಂಬವನಿಂದ ತೆಗೆದುಕೊಂಡು ಲಾರಿಯಲ್ಲಿ ಮಂಗಳೂರು ಕಡೆಗೆ ಸಾಗಾಟ ಮಾಡುತ್ತಿದ್ದ ವೇಳೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ಎಂಬಲ್ಲಿ ಉಪ್ಪಿನಂಗಡಿ ಪೆÇಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಸುಮಾರು 40 ಸಾವಿರ ರೂಪಾಯಿ ಮೌಲ್ಯದ 2 ಕೆಜಿ 100 ಗ್ರಾಂ ಗಾಂಜಾ, ಸಾಗಾಟ ನಡೆಸುತ್ತಿದ್ದ ಲಾರಿ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 105/2023 ಕಲಂ 8(ಸಿ) 20(ಬಿ)(11) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment